More

    ಬಿಡುಗಡೆಗೂ ಮುನ್ನ ಹೋರಾಟಕ್ಕೆ ಕರೆ ಕೊಟ್ಟ ಕೆಜಿಎಫ್​-2 ನಿರ್ದೇಶಕ; ಏನದು ವಿಷಯ?

    ಬೆಂಗಳೂರು: ಬಹುನಿರೀಕ್ಷಿತ ಹಾಗೂ ಅದ್ಧೂರಿ ನಿರ್ಮಾಣದ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ನಾಳೆ ಜಗತ್ತಿನಾದ್ಯಂತ ತೆರೆಗಳ ಮೇಲೆ ಅಬ್ಬರಿಸಲಿದ್ದು, ಇಂದೇ ಆ ಕುರಿತ ಹವಾ ಎಲ್ಲೆಡೆ ಸೃಷ್ಟಿಯಾಗಿದೆ. ಆದರೆ ಇನ್ನೇನು ಬಿಡುಗಡೆಗೆ ಒಂದು ದಿನ ಇದೆ ಎನ್ನುವಾಗಲೇ ಕೆಜಿಎಫ್​2 ನಿರ್ದೇಶಕರು ಹೋರಾಟವೊಂದಕ್ಕೆ ಕರೆ ನೀಡಿದ್ದಾರೆ.

    ಹೊಂಬಾಳೆ ಫಿಲ್ಮ್ಸ್​ ಬ್ಯಾನರ್​ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ, ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಮುಂತಾದವರು ಅಭಿನಯಿಸಿರುವ ಅದ್ಧೂರಿ ತಾರಾಗಣದ ಬಹುನಿರೀಕ್ಷಿತ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಜಗತ್ತಿನಾದ್ಯಂತ ಒಟ್ಟು 10 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಅದಾಗ್ಯೂ ನಿರ್ದೇಶಕ ಪ್ರಶಾಂತ್ ನೀಲ್ ಸ್ವಲ್ಪ ಆತಂಕದಲ್ಲಿದ್ದು, ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

    ‘ಕೆಜಿಎಫ್ ನಿಮಗೆ ನೀಡುವ ಸಲುವಾಗಿ ಎಂಟು ವರ್ಷಗಳ ಕಾಲ ರಕ್ತ, ಬೆವರು, ಕಣ್ಣೀರು ಹರಿಸಲಾಗಿದೆ. ನಿಮ್ಮೆಲ್ಲರಲ್ಲಿ ನಮ್ಮ ಕೋರಿಕೆ ಏನೆಂದರೆ ದಯವಿಟ್ಟು ನೀವ್ಯಾರೂ ಚಿತ್ರಮಂದಿರಗಳಲ್ಲಿ ಕೆಜಿಎಫ್​ ಚಾಪ್ಟರ್ 2 ಚಿತ್ರದ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡಬೇಡಿ. ನಾವೆಲ್ಲ ಕೆಜಿಎಫ್‌ನ ಅಬ್ಬರವನ್ನು ಚಿತ್ರಮಂದಿರದಲ್ಲೇ ನೋಡೋಣ. ಥಿಯೇಟರ್‌ನಲ್ಲೇ ನೋಡಲು ಕಾಯುತ್ತಿರುವವರಿಗೆ ಅದನ್ನು ಹಾಳುಗೆಡುವುದು ಬೇಡ‌’ ಎಂಬುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಮನವಿ ಮಾಡಿಕೊಂಡಿದ್ದಾರೆ.

    ಅಷ್ಟಕ್ಕೂ ಅವರಿಗಿರುವ ಆತಂಕವೆಂದರೆ ಪೈರಸಿಯದ್ದು. ಪೈರಸಿಗೆ ಅವಕಾಶ ಕೊಡುವುದು ಬೇಡ ಎನ್ನುವ ಕಾಳಜಿ ವ್ಯಕ್ತಪಡಿಸಿರುವ ಅವರು, ಪೈರಸಿ ವಿರುದ್ಧದ ಹೋರಾಟ ನಿಮ್ಮಿಂದಲೇ ಶುರುವಾಗುವಂಥದ್ದು. ದಯವಿಟ್ಟು ಸಿನಿಮಾದ ದೃಶ್ಯ ಹಾಗೂ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.

    ಅಲ್ಲದೆ ಪೈರಸಿ ಆಗದಂತೆ ಎಚ್ಚರಿಕೆ ವಹಿಸಿರುವ ಅವರು ಆ್ಯಂಟಿ ಪೈರಸಿ ಕಂಟ್ರೋಲ್ ರೂಮ್ ನಂಬರ್ ಕೂಡ ಹಂಚಿಕೊಂಡಿದ್ದಾರೆ. ಪೈರಸಿ ಪ್ರಯತ್ನ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ಆ್ಯಂಟಿ ಪೈರಸಿ ಕಂಟ್ರೋಲ್ ರೂಮ್​ಗೆ ತಿಳಿಸಿ ಎಂದು ಇ-ಮೇಲ್ ಐಡಿ, ವಾಟ್ಸ್​ಆ್ಯಪ್​ ನಂಬರ್​ಗಳು ಮತ್ತು ಟ್ವಿಟರ್ ಹ್ಯಾಂಡಲ್​ ಮಾಹಿತಿ ಕೂಡ ಹಂಚಿಕೊಂಡಿದ್ದಾರೆ.

    ಬಿಡುಗಡೆಗೂ ಮುನ್ನ ಹೋರಾಟಕ್ಕೆ ಕರೆ ಕೊಟ್ಟ ಕೆಜಿಎಫ್​-2 ನಿರ್ದೇಶಕ; ಏನದು ವಿಷಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts