

ಬಾಹುಬಲಿ ಸಿನಿಮಾ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರು ಮದುವೆಯಾಗುತ್ತಿರುವ ವಿಷಯ ಕಳೆದ ವಾರವಷ್ಟೇ ಕೇಳಿ ಬಂದಿತ್ತು. ಖುದ್ದು ರಾಣಾ, ಸೋಷಿಯಲ್ ಮೀಡಿಯಾದಲ್ಲಿ ತಾವು ಮದುವೆಯಾಗುತ್ತಿರುವ ಹುಡುಗಿಯ ಫೋಟೋ ಹಾಕಿಕೊಂಡು ಸಂಭ್ರಮಿಸಿದ್ದರು. ಇದೀಗ ಈ ಜೋಡಿಯ ನಿಶ್ಚಿತಾರ್ಥ ಆಗಿದ್ದು, ಇಟ್ಸ್ ಅಫಿಶಿಯಲ್ ಎಂದು ರಾಣಾ ಫೋಟೋ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಮಗಳ ಹುಟ್ಟುಹಬ್ಬಕ್ಕೆ ಸುದೀಪ್ ಕೊಟ್ಟ ಗಿಫ್ಟ್ ಏನು?
ಟಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಆಗಿರುವ 35 ವರ್ಷದ ರಾಣಾ, ಮದುವೆಯ ಮೇ 12ರಂದು ತಾವು ಮಿಹಿಕಾ ಬಜಾಜ್ ಅವರನ್ನು ಮದುವೆಯಾಗುತ್ತಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದರು. ಅದರಂತೆ ಅವರಿಬ್ಬರ ಎಂಗೇಜ್ಮೆಂಟ್ ಸದ್ದಿಲ್ಲದೆ ನಡೆದಿದೆ. ಕರೊನಾ ಹಿನ್ನೆಲೆಯಲ್ಲಿ ಸೀಮಿತ ಜನರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಹೈದರಾಬಾದ್ನಲ್ಲಿ ಈ ನಿಶ್ಚಿತಾರ್ಥ ನಡೆದಿದ್ದು, ಕುಟುಂಬಸ್ಥರು ಮತ್ತು ಆಪ್ತವರ್ಗದವರು ಮಾತ್ರ ಈ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.
ಇನ್ನು ರಾಣಾ ಮತ್ತು ಮಿಹಿಕಾ ಅವರ ನಿಶ್ಚಿತಾರ್ಥಕ್ಕೆ ಹಲವು ಸೆಲೆಬ್ರಿಟಿಗಳು ಶುಭ ಕೋರಿರುವುದು ವಿಶೇಷ. ಶಿವಕಾರ್ತಿಕೇಯನ್, ಸೈನಾ ನೆಹವಾಲ್, ಪ್ರಭಾಸ್ ಮುಂತಾದವರು ಶುಭ ಕೋರಿ ಸಂದೇಶ ಹಾಕಿದ್ದಾರೆ. ಇನ್ನು ರಾಣಾ ಅವರ ಅಸಂಖ್ಯ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಈ ನಿಶ್ಚಿತಾರ್ಥಕ್ಕೆ ಶುಭ ಕೋರಿದ್ದಾರೆ.
ಈಗಷ್ಟೇ ನಿಶ್ಚಿತಾರ್ಥ ಆಚರಿಸಿಕೊಂಡಿರುವ ರಾಣಾ ಮತ್ತು ಮಿಹಿಕಾ ಬಜಾಜ್ ಅವರ ಮದುವೆ ಯಾವಾಗ ಎಂಬ ಪ್ರಶ್ನೆ ಬರುವುದು ಸಹಜ. ಮೂಲಗಳ ಪ್ರಕಾರ, ಈ ಜೋಡಿ ಡಿಸೆಂಬರ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿಯಂತೆ.