ಗೃಹ ಸಚಿವರನ್ನು ಭೇಟಿ ಮಾಡಿದ ರಮೇಶ್, 100 ಚಿತ್ರ ನೋಡಲು ಆಹ್ವಾನ

12 pic sgh
Published on

ಬೆಂಗಳೂರು: ರಮೇಶ್ ಅರವಿಂದ್ ಅಭಿನಯದ ಮತ್ತು ನಿರ್ದೇಶನದ ‘100’ ಚಿತ್ರ ನ.19ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘100’ ಸೈಬರ್ ಕ್ರೖೆಮ್ ಕುರಿತಾದ ಚಿತ್ರ. ಪೊಲೀಸ್ ಇಲಾಖೆಯು ಸೈಬರ್ ಕ್ರೖೆಮ್ ಪ್ರಕರಣಗಳನ್ನು ಹೇಗೆ ಬಗೆಹರಿಸುತ್ತದೆ ಎಂದು ಹೇಳುವಂತಹ ಚಿತ್ರ. ಪೊಲೀಸ್ ಇಲಾಖೆಯು ಗೃಹ ಸಚಿವಾಲಯದಡಿ ಬರುವುದರಿಂದ, ಶುಕ್ರವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ರಮೇಶ್ ಅರವಿಂದ್ ಮತ್ತು ನಿರ್ವಪಕ ರಮೇಶ್ ರೆಡ್ಡಿ ಭೇಟಿ ಮಾಡಿ, ಚಿತ್ರ ನೋಡುವಂತೆ ಆಹ್ವಾನಿಸಿದ್ದಾರೆ.

ಭೇಟಿ ನಂತರ ಮಾತನಾಡಿದ ರಮೇಶ್ ಅರವಿಂದ್, ‘ಮುಂದಿನ ವಾರ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸುತ್ತಿದ್ದೇವೆ. ಈ ವಿಶೇಷ ಪ್ರದರ್ಶನಕ್ಕೆ ಅವರನ್ನು ಆಹ್ವಾನಿಸುವುದಕ್ಕೆ ಹೋಗಿದ್ದೆವು. ಈ ಸಂದರ್ಭದಲ್ಲಿ ಪೈರಸಿ ಕುರಿತು ಮಾತುಕತೆ ಆಯಿತು. ಪೈರಸಿಯಿಂದ ಯಾರಿಗೆ ಲಾಭವಿದೆಯೋ, ಅವರನ್ನು ಮಟ್ಟ ಹಾಕುವ ಯೋಚನೆಯನ್ನು ಮೊದಲು ಮಾಡಬೇಕು ಎಂದು ಗೃಹಸಚಿವರು ಈ ಸಂದರ್ಭದಲ್ಲಿ ಹೇಳಿದರು’ ಎನ್ನುತ್ತಾರೆ ರಮೇಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net