ಮರುಪ್ರಸಾರ ಆರಂಭಿಸಿರುವ ರಾಮಾಯಣ ಟಿಆರ್​ಪಿಯಲ್ಲಿ ದಾಖಲೆ

IMG-20200403-WA0014
Published on

ರಮಾನಂದ ಸಾಗರ್​ ನಿರ್ದೇಶನದ ರಾಮಾಯಣ 1987ರಲ್ಲಿ ಕಿರುತೆರೆಯಲ್ಲಿ ಬಿತ್ತರವಾಗಿತ್ತು. ಆವತ್ತಿನ ದಿನಗಳಲ್ಲೇ ದಾಖಲೆ ಮಟ್ಟದಲ್ಲಿಯೇ ಧಾರಾವಾಹಿ ವೀಕ್ಷಣೆಗೆ ಒಳಪಟ್ಟಿತ್ತು. ಹೀಗಿರುವಾಗ ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಮೂರು ದಶಕಕ್ಕೂ ಹಿಂದಿನ ರಾಮಾಯಣ ಮರು ಪ್ರಸಾರ ಆರಂಭಿಸಿತ್ತು. ಈಗ ಆ ಧಾರಾವಾಹಿಗೆ ಈಗ ದಾಖಲೆಯ ಟಿವಿ ರೇಟಿಂಗ್​ ಸಿಕ್ಕಿದೆ. ಬ್ರಾಡ್​ಕಾಸ್ಟ್ ಆಡಿಯನ್ಸ್ ರಿಸರ್ಚ್​ ಕೌನ್ಸಿಲ್​ (ಬಾರ್ಕ್​) ಮಾಹಿತಿ ಹೊರಹಾಕಿದ್ದು, 2015ರಿಂದ ಇಲ್ಲಿಯವರೆಗೂ ದೂರದರ್ಶನದಲ್ಲಿ ಹಿಂದಿ ಮನರಂಜನಾ ವಾಹಿನಿ ವಿಭಾಗದಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ಧಾರಾವಾಹಿ ಎಂಬ ಪಟ್ಟ ರಾಮಾಯಣಕ್ಕೆ ಸಿಕ್ಕಿದೆ.
ನಿತ್ಯ ಬೆಳಗ್ಗೆ 9 ಮತ್ತು ರಾತ್ರಿ 9ಕ್ಕೆ ಡಿಡಿ ನ್ಯಾಶನಲ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಯಣ, ಶನಿವಾರ ಬೆಳಗ್ಗೆ 3.4 ಕೋಟಿ ಜನರಿಂದ ವೀಕ್ಷಣೆ ಆದರೆ, ಭಾನುವಾರ 5.2 ಕೋಟಿ ಜನ ನೋಡಿದ್ದಾರೆ. ಒಟ್ಟು ಎರಡು ದಿನದ ಅವಧಿಯಲ್ಲಿ ನಾಲ್ಕು ಏಪಿಸೋಡ್​ಗಳನ್ನು ಒಟ್ಟಾರೆಯಾಗಿ 17 ಕೋಟಿ ಸಲ ವೀಕ್ಷಣೆ ಒಳಪಟ್ಟಿದೆ.
ರಾಮಾಯಣದ ಜತೆಗೆ ಮಹಾಭಾರತ, ಶಕ್ತಿಮಾನ್​, ಶ್ರೀಮಾನ್ ಶ್ರೀಮತಿ, ಚಾಣಾಕ್ಷ, ದೇಖ್​ ಬೈ ದೇಖ್​, ಸರ್ಕಸ್​, ಭ್ಯೂಮಕೇಶ್​ ಭಕ್ಷಿ ಧಾರಾವಾಹಿಗಳು ಡಿಡಿ ನ್ಯಾಶನಲ್​ನಲ್ಲಿ ಮರುಪ್ರಸಾರವಾಗುತ್ತಿವೆ. ಅಲಿಪ್​ ಲೈಲಾ, ಮಹಾಭಾರತ, ಉನಿಷದ್​ ಗಂಗಾ ಧಾರಾವಾಹಿಗಳು ಡಿಡಿ ಭಾರತಿಯಲ್ಲಿ ಪ್ರಸಾರ ಆರಂಭಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net