

ಮುಂಬೈ: ಸದಾ ವಿವಾದಗಳಿಂದಲೇ ಸದ್ದು ಮಾಡುವ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಟ್ವೀಟ್ ಒಂದನ್ನು ಮಾಡುವ ಮೂಲಕ ಮತ್ತೆ ವಿವಾದಕ್ಕೆ ಸಿಲುಕಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ವರ್ಮಾ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ. ನಿನಗೆ ಗೊತ್ತಾ ಇಡೀ ಪ್ರಪಂಚವೂ ಚೂತ್ಯಗಳಿಂದಲೇ ತುಂಬಿ ಹೋಗಿದೆ? ಎಂದು ಚಿತ್ರದಲ್ಲಿ ವ್ಯಕ್ತಿಯೊಬ್ಬ ನಾಯಿಗೆ ಕೇಳಿದಂತೆಯೂ, ಅದಕ್ಕೆ ಉತ್ತರಿಸುವ ನಾಯಿ ಹೌದು, ಆದರೆ ಬಹುತೇಕರು ರೋಗ ಲಕ್ಷಣರು ಎನ್ನುವ ದೃಶ್ಯ ಚಿತ್ರದಲ್ಲಿದೆ. ಇದನ್ನೂ ಓದಿ: ಎರಡು ದಶಕ ಹಿಂದೆ ಸರಿದ ಚಿತ್ರರಂಗ: ನೂರು ಕೋಟಿ ಕನಸಿನ ಮಾತು!
ಯಾವ ಉದ್ದೇಶಕ್ಕೆ ಈ ಚಿತ್ರವನ್ನು ವರ್ಮಾ ಪೋಸ್ಟ್ ಮಾಡಿದ್ದಾರೋ ತಿಳಿದಿಲ್ಲ. ಆದರೆ, ವರ್ಮಾ ವಿರುದ್ಧ ನೆಟ್ಟಿಗರು ಸಿಡಿಮಿಡಿಗೊಂಡಿದ್ದಾರೆ. ನಿನ್ನ ಹಾಗೆಯೇ, ನಿನಗೂ ರೋಗ ಲಕ್ಷಣಗಳಿಲ್ಲ, ಇದು ತಪ್ಪೊಪ್ಪಿಗೆ ಇರಬಹುದು ಎಂದೆಲ್ಲಾ ಜರಿದಿದ್ದಾರೆ. ಇನ್ನು ಕೆಲವು ವರ್ಮಾರಿಗೆ ಬೆಂಬಲ ವ್ಯಕ್ತಪಡಿಸಿ ಮಾಸ್, ಸೂಪರ್ ಎಂದು ಹೊಗಳಿದ್ದಾರೆ. ಆದರೆ, ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್ ಚಿತ್ರರಂಗಳಲ್ಲಿ ಸ್ವಜನಪಕ್ಷಪಾತದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದ ವರ್ಮಾ, ಸುಶಾಂತ್ ಹೀಗೇಕೆ ಮಾಡಿಕೊಂಡ ಎಂಬುದು ನನಗೆ ತಿಳಿದಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸುಶಾಂತ್ನನ್ನು ಹೊರಗಿನವನು ಎಂದು ನೋಡಿದ್ದಕ್ಕೆ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಕಲ್ಪನೆ ಮಾಡಿಕೊಂಡರೆ, ಖಾಲಿ ಹೊಟ್ಟೆಯೊಂದಿಗೆ ಬರಿ ಕಾಲಲ್ಲಿ ನಡೆದುಕೊಂಡು ಹೋಗುತ್ತಿರುವ ಕೋಟ್ಯಂತರ ವಲಸೆ ಕಾರ್ಮಿಕರು ತಮ್ಮನ್ನು ತಾವು ಅನೇಕ ಬಾರಿ ಕೊಲ್ಲಬೇಕಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್) ಇದನ್ನೂ ಓದಿ: ಮಹೇಶ್ ಎದುರು ಕನ್ನಡ ಸ್ಟಾರ್: ಪ್ರಿನ್ಸ್ ಜತೆ ನಟಿಸಲಿರುವ ನಟ ಯಾರು?