ಹೈದರಾಬಾದ್: ಕೇವಲ ತಮ್ಮ ಸಿನಿಮಾಗಳಿಗೆ ಅಲ್ಲದೇ ಜನರಿಗೆ ಸಹಾಯ ಮಾಡುವ ವ್ಯಕ್ತಿತ್ವದಿಂದಲೂ ತೆಲುಗಿನ ಖ್ಯಾತ ನಟ ಹಾಗೂ ನಟ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ತೇಜ್ ಹಲವು ಬಾರಿ ಜನಮನ ಗೆದ್ದಿದ್ದಾರೆ. ಇನ್ನು, ನಟ ರಾಮ್ ಚರಣ್ ಅವರಿಗೆ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಹೀಗಾಗಿ, ಸದ್ಯ ಒಂದು ಕಾರಣಕ್ಕೆ ನಟ ರಾಮ್ ಚರಣ್ ತೇಜ್ ವಿಶ್ವಮಟ್ಟದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಹೌದು, ಯೂಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಿಂದ ಯೂಕ್ರೇನ್ ಜನ ಬೇಸತ್ತು ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಯೂಕ್ರೇನ್ ಸೈನಿಕನೊಬ್ಬನಿಗೆ ರಾಮ್ ಚರಣ್ ತೇಜ್ ಅವರು ಹಣದ ನೆರವು ನೀಡಿದ್ದು, ಸದ್ಯ ವಿಶ್ವಾದ್ಯಂತ ಎಲ್ಲರ ಗಮನ ಸೆಳೆದು ಜತೆಗೆ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಂದಹಾಗೆ, ರಾಮ್ ಚರಣ್ ಮತ್ತು ಅವರು ಸಹಾಯ ಮಾಡಿದ ಸೈನಿಕನಿಗೆ ಒಂದು ಸಂಬಂಧವಿದೆಯಂತೆ.