ಹೈದರಾಬಾದ್: ನಟಿ ಸಮಂತಾ ಹೆಸರು 2021ರಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಹೆಸರು. ವಿಚ್ಛೇದನ, 'ಪುಷ್ಪ' ಸಿನಿಮಾ ಐಟಂ ಹಾಡು, ವಿವಾದಾತ್ಮಕ ಹೇಳಿಕೆಗಳು, ಜಾಲಿ ಟ್ರಿಪ್‌ಗಳು, ಗೋವಾ ಬಿಕಿನಿ ಫೋಟೋಗಳು, ಫಿಲ್ಮ ಫೇರ್ ಪ್ರಶಸ್ತಿ, ಸಾಲು ಸಾಲು ಸಿನಿಮಾಗಳ ಆಫರ್ಗಳು ಅಂತ ಹೀಗೆ ಹತ್ತು ಹಲವಾರು ಕಾರಣಗಳಿಂದ ಹಾಟ್ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡಿದ್ದಾರೆ. ಜೊತೆಗೆ, ತಮ್ಮ ವಿಚ್ಛೇದನದಿಂದ ಸಖತ್ ಟ್ರೋಲ್ ಮತ್ತು ಟೀಕೆ ಟಿಪ್ಪಣಿಗಳಿಗೆ ಗುರಿಯಾಗಿದ್ದರು. ಆದರೆ, ನಟಿಯ ವಿಚ್ಛೇದನ, ವೈಯಕ್ತಿಕ ಜೀವನ ಕುರಿತು ಈಗ ಇಬ್ಬರು ತೆಲುಗಿನ ಸೂಪರ್ ಸ್ಟಾರ್ ನಟರು ಮಾತಾಡಿದ್ದಾರೆ. ಅಷ್ಟೇ ಅಲ್ಲದೇ, ನಟಿಗೆ ಬೆಂಬಲ ನೀಡಿದ್ದಾರೆ.