ಮನೆಯಲ್ಲೇ ಕಬಡ್ಡಿ, ಕಬಡ್ಡಿ, ಕಬಡ್ಡಿ ... ಲಾಕ್‌ಡೌನ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್ ಹೊಸ ಪಟ್ಟು

Rakul Preet Singh Final
Published on

ಲಾಕ್‌ಡೌನ್ ಸಮಯವನ್ನು ಬಾಲಿವುಡ್ ಮಂದಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೆಲವರು ಓದುವುದರಲ್ಲಿ ಬ್ಯುಸಿಯಾದರೆ, ಇನ್ನೂ ಕೆಲವರು ಮನೆ ಕ್ಲೀನ್ ಮಾಡುತ್ತಾ, ಮನೆಯವರ ಜತೆಗೆ ಸಮಯ ಕಳೆಯುತ್ತಿದ್ದಾರೆ. ಬಾಲಿವುಡ್‌ನ ಜನಪ್ರಿಯ ನಟಿ ರಾಕುಲ್ ಪ್ರೀತ್ ಸಿಂಗ್ ಸಹ ಇದಕ್ಕೆ ಹೊರತಲ್ಲ. ಅವರು ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ವಿವಿಧ ಆಟ ಆಡುತ್ತಾ ಕಳೆಯುತ್ತಿದ್ದಾರೆ.

ಹೌದು, ಸದ್ಯ ಸಾಕಷ್ಟು ಬಿಡುವಿದ್ದರೂ ರಾಕುಲ್ ಬಹಳ ಬ್ಯುಸಿಯಾಗಿದ್ದಾರೆ. ಅವರು ತಮ್ಮ ಸಹೋದರ ಅಮನ್ ಜತೆಗೆ ವಿವಿಧ ಆಟಗಳನ್ನು ಆಡುತ್ತಾ ಕಾಲ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲ, ಅದನ್ನು ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಒಂದು ವಿಡಿಯೋ ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ತಮ್ಮ ಸಹೋದರನ ಜತೆಗೆ ಕಬಡ್ಡಿ ಆಡಿರುವುದಷ್ಟೇ ಅಲ್ಲ, ಅದರಲ್ಲಿ ಗೆದ್ದಿದ್ದಾರೆ ಕೂಡ.

ಬಾಲ್ಯದೆಡೆಗೆ ಎಂಬ ಕ್ಯಾಪ್ಶನ್ ಇರುವ ಈ ವಿಡಿಯೋದಲ್ಲಿ ರಾಕುಲ್ ತಮ್ಮ ಸಹೋದರನ ಜತೆಗೆ ಕಬಡ್ಡಿ, ಡಾಗ್ ಆ್ಯಂಡ್ ಬೋನ್, ಚಿಡಿಯಾ ಉಡ್ ಮುಂತಾದ ಆಟಗಳನ್ನು ಆಡುವುದನ್ನು ನೋಡಬಹುದು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು, ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಲಾಕ್‌ಡೌನ್ ಸಮಯದಲ್ಲಿ ರಾಕುಲ್ ಬಹಳ ಸಕ್ರಿಯವಾಗಿದ್ದು, ಹಸಿದವರಿಗೆ ಪ್ರತಿನಿತ್ಯ ಆಹಾರ ಒದಗಿಸುತ್ತಿದ್ದಾರೆ. ತಮ್ಮ ಅಪಾರ್ಟ್‌ಮೆಂಟ್‌ನಲ್ಲೇ ಅಡುಗೆ ಮಾಡಿಸಿ, ಗುರುಗ್ರಾಮಗದಲ್ಲಿರುವ ಸ್ಲಂನಲ್ಲಿರುವ 200ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಹಂಚುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net