ಅರೆಸ್ಟ್ ಮಿ ಬೇಬಿ ಎಂದ ರೋಹಿತ್; ‘ರಕ್ತಾಕ್ಷ’ ಚಿತ್ರದ ಜವಾರಿ ಹಾಡು ರಿಲೀಸ್

raktaksha
Published on

ಬೆಂಗಳೂರು: ಮಾಡೆಲಿಂಗ್ ಲೋಕದಿಂದ ಚಂದನವನಕ್ಕೆ ಕಾಲಿಡುತ್ತಿರುವ ರೋಹಿತ್, ‘ರಕ್ತಾಕ್ಷ’ ಸಿನಿಮಾಗೆ ನಾಯಕರಾಗಿದ್ದಾರೆ. ವಾಸುದೇವ್ ಎಸ್.ಎನ್ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನೂ ರೋಹಿತ್ ಹೊತ್ತಿದ್ದಾರೆ. ಈಗಾಗಲೇ ಚಿತ್ರದ ಆ್ಯಕ್ಷನ್ ಟೀಸರ್ ಹಾಗೂ ಶೀರ್ಷಿಕೆ ಗೀತೆ ರಿಲೀಸ್ ಆಗಿದ್ದು, ಇತ್ತೀಚೆಗಷ್ಟೆ ಚಿತ್ರದ ಜವಾರಿ ಹಾಡು ‘ಅರೆಸ್ಟ್ ಮಿ ಬೇಬಿ’ ಬಿಡುಗಡೆಯಾಗಿದೆ.

ಈ ಹಾಡಿಗೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದು, ಧೀರೆಂದ್ರ ದಾಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ರೋಹಿತ್ ಹೆಜ್ಜೆ ಹಾಕಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಗುರುದೇವ್ ನಾಗರಾಜ, ರಾಮಣ್ಣ, ವಿಲಾಸ್, ಪ್ರಭು, ವಿಶ್ವ, ಭದ್ರಿ, ನಾರಾಯಣ, ಬಸವರಾಜ ಆದಾಪುರ್, ಭರತ್ ಚಿತ್ರದ ತಾರಾಗಣದಲ್ಲಿದ್ದಾರೆ.

ಅಪ್ಪು ಹೆಸರಿನಲ್ಲಿ ಸಮಾಜಸೇವೆ
ಮಸ್ಕಿ, ಲಿಂಗಸಗೂರು, ಸಿಂಧನೂರು ಭಾಗದ ಅನಾಥಾಶ್ರಮಗಳಿಗೆ ರೋಹಿತ್ ತಮ್ಮ ಹುಟ್ಟುಹಬ್ಬದಂದು ಆಹಾರ ಧಾನ್ಯ ಹಾಗೂ ಪುಸ್ತಕಗಳನ್ನು ವಿತರಣೆ ಮಾಡಿದ್ದಾರೆ. ಮಸ್ಕಿ ಭಾಗದ ಅನಾಥಾಶ್ರಮಕ್ಕೆ ಅಪ್ಪು ಹೆಸರಿನಲ್ಲಿ ಕಳೆದ ಒಂದು ವರ್ಷದಿಂದ ಪ್ರತಿ ತಿಂಗಳು ಆಹಾರ ಧಾನ್ಯ ಹಾಗೂ ಪುಸ್ತಕಗಳನ್ನು ವಿತರಣೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net