ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ ಶೂಟಿಂಗ್ ಮುಕ್ತಾಯ

Charlie
Published on

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ‘777 ಚಾರ್ಲಿ’ ಚಿತ್ರದ ಶೂಟಿಂಗ್ ಕೊನೆಗೂ ಮುಗಿದಿದೆ. ಶುಕ್ರವಾರವಷ್ಟೇ ಚಿತ್ರತಂಡ ಕುಂಬಳಕಾಯಿ ಒಡೆದು ಸಂಭ್ರಮಿಸಿದೆ. ‘ಚಾರ್ಲಿ’ ಚಿತ್ರದ ಶೂಟಿಂಗ್ ಸಲೀಸಾದ ದಾರಿಯಾಗಿರಲಿಲ್ಲ. ರಕ್ಷಿತ್ ಒಂದು ಬದಿಯಲ್ಲಿ ಪ್ರಧಾನ ಪಾತ್ರದಲ್ಲಿದ್ದರೆ, ಇತ್ತ ನಾಯಿಗಳೂ ಚಿತ್ರದ ಹೀರೋಗಳಾಗಿದ್ದವು. ಮಾತು ಬಾರದ ಪ್ರಾಣಿಗಳಿಂದಲೇ ನಟನೆ ಮಾಡಿಸಿ, ದೃಶ್ಯಗಳನ್ನು ಪಡೆದುಕೊಂಡಿದ್ದರು ನಿರ್ದೇಶಕ ಕಿರಣ್ ರಾಜ್.

ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಪೋಸ್ಟರ್ ಮತ್ತು ಹಾಡುಗಳಲ್ಲಿಯೇ ಅದೆಲ್ಲದಕ್ಕೂ ಸಾಕ್ಷ್ಯ ಸಿಕ್ಕಿದೆ. ಇದೀಗ 164 ದಿನಗಳ ಚಿತ್ರೀಕರಣ ಮುಗಿಸಿರುವ ತಂಡ, ಬಾಕಿ ಉಳಿದಿರುವ ಕೆಲಸಗಳತ್ತ ಮುಖ ಮಾಡಿದೆ. ಕನ್ನಡದ ಜತೆಗೆ ಹಲವು ಭಾಷೆಗಳಲ್ಲಿ ಸಿದ್ಧವಾಗಿರುವ ಈ ಚಿತ್ರ ಡಿ.31ಕ್ಕೆ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net