Rakshith Shetty Interview ; ದೊಡ್ಡ ಕನಸುಗಳ ರಕ್ಷಿತ್​ - "ಇಬ್ಬನಿ'ಯಲ್ಲಿ ನಾಲ್ಕು ಕಥೆಗಳನ್ನು "ತಬ್ಬಿದ' ನಟ

sdvsd
Published on

| ಹರ್ಷವರ್ಧನ್​ ಬ್ಯಾಡನೂರು

ಕಳೆದ ವರ್ಷ "ಸಪ್ತಸಾಗರದಾಚೆ ಎಲ್ಲೋ' ಸರಣಿಯ ಎರಡು ಚಿತ್ರಗಳಲ್ಲಿ ನಟ ರಕ್ಷಿತ್​ ಶೆಟ್ಟಿ ಮಿಂಚಿದ್ದರು. ಅವರ ನಟನೆಯ ಯಾವ ಚಿತ್ರವೂ ಈ ವರ್ಷ ರಿಲೀಸ್​ ಆಗುತ್ತಿಲ್ಲ. ಹಾಗಂತ ರಕ್ಷಿತ್​ ಸುಮ್ಮನೇ ಕುಳಿತಿಲ್ಲ. ಬದಲಾಗಿ ನಾಲ್ಕು ಸಿನಿಮಾಗಳ ಸಿದ್ಧತೆಗಳಲ್ಲಿ ತೊಡಗಿದ್ದಾರೆ. ಹಾಗಾದರೆ "ರಿಚರ್ಡ್​ ಆ್ಯಂಟನಿ' ಯಾವಾಗ? ರತ್​ ಮುಂದಿನ ಸಿನಿಮಾಗಳು ಯಾವುವು? ನಿರ್ಮಾಪಕ ರಕ್ಷಿತ್​​ ಏನು ಮಾಡುತ್ತಿದ್ದಾರೆ? ಎಂಬುದರ ಬಗ್ಗೆ ಇತ್ತೀಚೆಗಷ್ಟೆ ಖುದ್ದು ಅವರೇ ವಿಜಯವಾಣಿ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

ನಾಲ್ಕು ಚಿತ್ರಗಳಲ್ಲಿ ಬಿಜಿ
ರಕ್ಷಿತ್​​ ಶೆಟ್ಟಿ ಸದ್ಯ "ರಿಚರ್ಡ್​ ಆ್ಯಂಟನಿ', "ಮಿಡ್​ವೇ ಟು ಮೋಕ್ಷ' ಮತ್ತು "ಪುಣ್ಯಕೋಟಿ 1 ಮತ್ತು 2' ಚಿತ್ರಗಳ ಕಥೆ ಮಾಡುತ್ತಿದ್ದಾರಂತೆ. ""ರಿಚರ್ಡ್​ ಆ್ಯಂಟನಿ' ಕಥೆ ಇನ್ನೇನು ಕೊನೆಯ ಹಂತದಲ್ಲಿದೆ. ಮುಂದಿನ ತಿಂಗಳು ಅಮೆರಿಕದಲ್ಲಿ ಲೊಕೇಷನ್​ ನೋಡಲು ಹೋಗಲಿದ್ದೇನೆ. 20 ನಿಮಿಷ ಅಮೆರಿಕ ಮತ್ತು ದುಬೈ ಬರಲಿದೆ ನಂತರ ಕಥೆ ಭಾರತದಲ್ಲೇ ನಡೆಯಲಿದೆ. ಇದೇ ವರ್ಷದಂತ್ಯಕ್ಕೆ "ರಿಚರ್ಡ್​ ಆ್ಯಂಟನಿ' ಶೂಟಿಂಗ್​ ಪ್ರಾರಂಭಿಸಲಿದ್ದೇನೆ. ಹಳೆಯ ಟೀಮ್​ ಇರುತ್ತದೆ. ಜತೆಗೆ ಹೊಸ ನಾಲ್ಕೈದು ಪಾತ್ರಗಳಿರಲಿವೆ. ಅದರ ಶೂಟಿಂಗ್​ ಮುಗಿಸಿ, ಪೋಸ್ಟ್​&ಪ್ರೊಡಕ್ಷನ್​ ಸಮಯದಲ್ಲಿ "ಮಿಡ್​ವೇ ಟು ಮೋಕ್ಷ' ಶೂಟಿಂಗ್​ ಹೋಗಲು ಪ್ಲ್ಯಾನ್​​ ಮಾಡಿಕೊಂಡಿದ್ದೇನೆ. "ಪುಣ್ಯಕೋಟಿ' ಸರಣಿಯ ಪ್ರಿ-ಪ್ರೊಡಕ್ಷನ್​ಗೆ ಒಂದೂವರೆ ವರ್ಷ ಸಮಯ ಬೇಕು. ಮುಂದಿನ ವರ್ಷ "ರಿಚರ್ಡ್​ ಆ್ಯಂಟನಿ' ತೆರೆಗೆ ಬರಲಿದೆ. ತಡವಾದರೆ 2026ಕ್ಕೆ ಅದು ಮತ್ತು "ಮಿಡ್​ವೇ ಟು ಮೋಕ್ಷ' ಬಿಡುಗಡೆಯಾಗಲಿವೆ' ಎಂದು ಮಾಹಿತಿ ನೀಡುತ್ತಾರೆ.

ಡೈರೆಕ್ಷನ್​ ಹೆಚ್ಚು ಇಷ್ಟ
"ನನಗೆ ಫಿಲಂ ಮೇಕಿಂಗ್​ ಹೆಚ್ಚು ಇಷ್ಟ' ಎನ್ನುವ ರಕ್ಷಿತ್​​, "ನಟನೆಯ ಬಗ್ಗೆ ಹೆಚ್ಚು ಸೀರಿಯಸ್​ ಆದಾಗ, ಆ ಪಾತ್ರದ ಒಳಗೆ ಇಳಿದಾಗ ಶೂಟಿಂಗ್​ ಸಮಯದಲ್ಲಿ ಸೆಟ್​ನಲ್ಲಿ ಬೋರ್​ ಆಗುತ್ತಿರುತ್ತದೆ. ಸದ್ಯಕ್ಕೆ ಕೆಲ ಸಿನಿಮಾಗಳನ್ನು ನಾನೇ ನಿರ್ದೇಶಿಸಿ, ನಟಿಸಲಿದ್ದೇನೆ. ಕಥೆ ಇಷ್ಟವಾದರೆ ಮಾತ್ರ ಮುಂದೆ ಬೇರೆಯವರ ನಿರ್ದೇಶನದಲ್ಲಿ ನಟಿಸುವ ಬಗ್ಗೆ ಯೋಚನೆ ಮಾಡಲಿದ್ದೇನೆ' ಎನ್ನುತ್ತಾರೆ. ಹಾಗೇ "ನನ್ನ ಕನಸುಗಳು ದೊಡ್ಡವು. ದೊಡ್ಡ ಕನಸುಗಳು ನನಸಾಗಲು ಸಮಯ ಬೇಕು. "ರಿಚರ್ಡ್​ ಆ್ಯಂಟನಿ' ದೊಡ್ಡ ಸಿನಿಮಾ, "ಪುಣ್ಯಕೋಟಿ' ಸರಣಿ ಅದಕ್ಕೂ ದೊಡ್ಡದು' ಎಂದು ಮಾಹಿತಿ ನೀಡುತ್ತಾರೆ.

ವರ್ಷಕ್ಕ 15 ಒಳ್ಳೆ ಚಿತ್ರಗಳು ಬರಬೇಕು
ಇನ್ನು ನಿರ್ಮಾಣದಲ್ಲೂ ಬಿಜಿಯಾಗಿರುವ ರಕ್ಷಿತ್​​, "ವರ್ಷಕ್ಕೆ ಐದಾರು ಸಿನಿಮಾ ನಿರ್ಮಿಸಬೇಕು ಅಂತ ಪ್ಲಾ$್ಯನ್​ ಮಾಡುತ್ತಿದ್ದೇವೆ' ಎನ್ನುತ್ತಾರೆ. ಅದಕ್ಕೆ ಕಾರಣ, "ಕನ್ನಡದಲ್ಲಿ ಪ್ರತಿ ವರ್ಷ 15 ಒಳ್ಳೆ ಸಿನಿಮಾಗಳು ಬರಬೇಕು. ಇಲ್ಲದಿದ್ದರೆ ಚಿತ್ರರಂಗ ಅಂತನ್ನಿಸುವುದಿಲ್ಲ. ಪ್ರೇಕ್ಷಕರನ್ನು ಬಿಜಿಯಾಗಿಡಬೇಕು. ಪ್ರತಿ ತಿಂಗಳು ಒಂದು ಉತ್ತಮ ಸಿನಿಮಾ ಬರಬೇಕು. ಈಗಿನ ಪರಿಸ್ಥಿತಿಯಲ್ಲಿ ಆರು ತಿಂಗಳಿಗೋ, ವರ್ಷಕ್ಕೋ ಒಂದು ಒಳ್ಳೆ ಸಿನಿಮಾ ಬರುತ್ತಿದೆ. ಹೀಗಾದರೆ ಅದು ಇಂಡಸ್ಟ್ರಿ ಅಂತ ಅನ್ನಿಸಿಕೊಳ್ಳುವುದಿಲ್ಲ. ಹೀಗಾಗಿ ಉತ್ತಮ ಕಥೆಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿರಬೇಕು' ಎಂದು ಹೇಳಿಕೊಳ್ಳುತ್ತಾರೆ.

ಲಾಭ, ನಷ್ಟದ ಲೆಕ್ಕಾಚಾರ
ರಕ್ಷಿತ್​ ಶೆಟ್ಟಿ ಪರಂವ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಕಳೆದ ಎಂಟು ವರ್ಷಗಳಿಂದ 12 ಚಿತ್ರಗಳನ್ನು ನಿರ್ಮಿಸಿದ್ದಾರೆ. "ಸುಮಾರು 108 ಕೋಟಿ ರೂ. ಹೂಡಿದ್ದೇವೆ. 350 ಕೋಟಿ ರೂ.ವರೆಗೂ ವ್ಯವಹಾರ ನಡೆದಿದೆ. 166 ಕೋಟಿ ರೂ. ಸಂಪಾದಿಸಿದ್ದೇವೆ. ಸದ್ಯ "ಅರ್ಥ', "ಸ್ಟ್ರಾಬೆರಿ', "ಅಬ್ರಾಕಡಬ್ರಾ' ಸೇರಿ ಕೆಲ ಸಿನಿಮಾಗಳು ಇನ್ನೂ ರಿಲೀಸ್​ ಆಗಬೇಕಿದೆ. ಹೀಗಾಗಿ 12ರಿಂದ 14 ಕೋಟಿ ರೂ. ಅಲ್ಲಿನ ಹೂಡಿಕೆ ಹಾಗೇ ಇದೆ. ಒಂದು ಸಿನಿಮಾ ಮಾಡಿ ಅದರಿಂದ ಲಾಭವೇನು ಕಾಯುತ್ತಾ ಕೂರುವುದಕ್ಕಿಂತ, ವರ್ಷಕ್ಕೆ 10 ಸಿನಿಮಾ ನಿರ್ಮಿಸುತ್ತೇನೆ. ಅದರಲ್ಲಿ ಐದು ್ಲಾಪ್​ ಆದರೂ, ಐದು ಕೈಹಿಡಿಯುತ್ತದೆ. ಅದರಿಂದ ಒಟ್ಟಾರೆಯಾಗಿ ಲಾಭವೇ ಇರುತ್ತದೆ. ಆದರೆ, ಒಳ್ಳೆ ಕಥೆಗಳ ಆಯ್ಕೆ ಮುಖ್ಯವಾಗಿರಬೇಕು. ಈ ಐಡಿಯಾನೇ ನಾನು ಅನುಸರಿಸುತ್ತಿದ್ದೇನೆ' ಎನ್ನುತ್ತಾರೆ ರಕ್ಷಿತ್​.


ಇಬ್ಬನಿ ತಬ್ಬಲು ಕಾರಣ…
ರಕ್ಷಿತ್​ ನಿರ್ಮಾಣದ "ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಇದೇ ಸೆ. 5ರಂದು ರಿಲೀಸ್​ ಆಗಲಿದೆ. ಚಿತ್ರದ ಬಗ್ಗೆ ಅವರು, "ವಿಹಾನ್​, ಅಂಕಿತಾ ಮತ್ತು ಮಯೂರಿ ಅದ್ಭುತವಾಗಿ ಪಾರ್ಮ್​ರ್ ಮಾಡಿದ್ದಾರೆ. ಚಂದ್ರಜಿತ್​ ಬೆಳ್ಳಿಯಪ್ಪ ಒಳ್ಳೆ ಕಥೆ ಮಾಡಿಕೊಂಡಿದ್ದಾರೆ. ಈ ರೀತಿಯ ಪ್ರೇಮಕಥೆಗಳನ್ನು ನೋಡಿದ್ದರೂ ಇದೊಂದು ವಿಶೇಷವಾದ ಕಥೆ ಅಂತ ನೋಡಿದರೆ ಗೊತ್ತಾಗುತ್ತದೆ ಅರ್ಥವಾಗುತ್ತದೆ' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net