ಹೊಸ ಚಿತ್ರದ ಮೂಲಕ ಎಂಟ್ರಿ ಕೊಡಲು ರಾಕ್​ ಸ್ಟಾರ್​ ರೆಡಿ

Raksh - Final
Published on

ಬೆಂಗಳೂರು: ಶುಕ್ರವಾರ 'ರಾಕಿಂಗ್​ ಸ್ಟಾರ್​' ಯಶ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರೆ, ಕಿರುತೆರೆಯಲ್ಲಿ 'ರಾಕ್ ​ಸ್ಟಾರ್' ಎಂದೇ ಜನಪ್ರಿಯವಾಗಿರುವ ರಕ್ಷ್​ ಸಹ ಅದೇ ದಿನ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

'ಪುಟ್ಟಗೌರಿ ಮದುವೆ' ಮೂಲಕ ಕಿರುತೆರೆಗೆ ಪರಿಚಿತರಾದ ರಕ್ಷ್​, ಆ ಧಾರಾವಾಹಿಯಲ್ಲಿ ಸಾಕಷ್ಟು ಜನಪ್ರಿಯರಾದವರು. ಆ ನಂತರ ಇದೀಗ 'ಗಟ್ಟಿಮೇಳ' ಧಾರಾವಾಹಿಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಕಿರುತೆರೆಯಲ್ಲದೆ ಹಿರಿತೆರೆಯಲ್ಲೂ ಗುರುತಿಸಿಕೊಂಡಿರುವ ರಕ್ಷ್​, ಕಳೆದ ವರ್ಷ ಬಿಡುಗಡೆಯಾದ 'ನರಗುಂದ ಬಂಡಾಯ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ನಾಗೇಂದ್ರ ಮಾಗಡಿ ನಿರ್ದೇಶನದ ಈ ಚಿತ್ರವು, 80ರ ದಶಕದಲ್ಲಿ ನರಗುಂದದಲ್ಲಿ ನಡೆದ ರೈತ ಚಳವಳಿಯ ಕುರಿತಾಗಿತ್ತು. ಈ ಚಿತ್ರ ಮಾರ್ಚ್​ನಲ್ಲಿ ಬಿಡುಗಡೆಯಾಗಿ ಜನರಿಂದ ಮೆಚ್ಚುಗೆ ಪಡೆಯುತ್ತಿತ್ತು. ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಚಿತ್ರದ ಪ್ರದರ್ಶನ ರದ್ದಾಗಿತ್ತು.

ಇದೀಗ, ರಕ್ಷ್​ ಇನ್ನೊಂದು ಹೊಸ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಡುವುದುಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರವು ಸದ್ಯ ಪ್ರೀ-ಪ್ರೊಡಕ್ಷನ್​ ಹಂತದಲ್ಲಿದ್ದು ತೆರೆಮರೆಯಲ್ಲಿ ಸಾಕಷ್ಟು ಕೆಲಸಗಳಾಗುತ್ತಿವೆ. ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಸದ್ಯದಲ್ಲೇ ಹಂಚಿಕೊಳ್ಳುವುದರ ಜತೆಗೆ, ಹಿರಿತೆರೆಗೆ ದೊಡ್ಡ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿ ರಕ್ಷ್​ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net