More

    ‘ಸೂರ್ಯವಂಶಿ’ ದಾಖಲೆ ಮುರಿದ ‘ಕೆಜಿಎಫ್​ 2’

    ಬೆಂಗಳೂರು: ಯಶ್​ ಅಭಿನಯದ ‘ಕೆಜಿಎಫ್​ 2’ ಚಿತ್ರದ ಟೀಸರ್ ಎಲ್ಲಾ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಯೂಟ್ಯೂಬ್​ನಲ್ಲಿ ಅತೀ ಹೆಚ್ಚು ವೀಕ್ಷಣೆಯಾಗಿರುವ ಭಾರತೀಯ ಟ್ರೇಲರ್​ಗಳ ಪೈಕಿ ‘ಸೂರ್ಯವಂಶಿ’ ಎರಡನೆಯ ಸ್ಥಾನದಲ್ಲಿತ್ತು. ಈಗ ಆ ದಾಖಲೆಯನ್ನು ಮುರಿದಿರುವ ‘ಕೆಜಿಎಫ್​ 2’ ಎರಡನೆಯ ಸ್ಥಾನಕ್ಕೆ ಬಂದಿದೆ.

    'ಸೂರ್ಯವಂಶಿ' ದಾಖಲೆ ಮುರಿದ 'ಕೆಜಿಎಫ್​ 2'

    ಇದನ್ನೂ ಓದಿ: ಶಕುಂತಲೆಯಾದ ಸಮಂತಾ ಅಕ್ಕಿನೇನಿ

    ‘ಕೆಜಿಎಫ್​ 2’ ಚಿತ್ರದ ಟೀಸರ್​ ಗುರುವಾರ ರಾತ್ರಿ ಬಿಡುಗಡೆಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ 90 ಮಿಲಿಯನ್​ ವೀಕ್ಷಣೆಯಾಗಿದೆ. ಈ ಮೂಲಕ ‘ಆರ್​ಆರ್​ಆರ್​’, ‘ಲಕ್ಷ್ಮೀ’, ‘ಮಾಸ್ಟರ್​’ ಮುಂತಾದ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದು ಹಾಕಿದೆ. ಬರೀ ವೀಕ್ಷಣೆಯ ವಿಷಯದಲ್ಲಷ್ಟೇ ಅಲ್ಲ, ಲೈಕ್ಸ್​ ವಿಷಯದಲ್ಲೂ ‘ಕೆಜಿಎಫ್​ 2’ ಚಿತ್ರದ ಟೀಸರ್​ ಮುನ್ನುಗ್ಗುತ್ತಿದೆ.

    ಭಾರತೀಯ ಚಿತ್ರರಂಗದಲ್ಲಿ ಯೂಟ್ಯೂಬ್​ನಲ್ಲಿ ಅತೀ ಹೆಚ್ಚು ವೀಕ್ಷಣೆಯಾಗಿರುವ ಟ್ರೇಲರ್​ ಎಂದರೆ ಅದು ಸುಶಾಂತ್ ಸಿಂಗ್​ ರಜಪೂತ್​ ಅಭಿನಯದ ‘ದಿಲ್​ ಬೇಚಾರಾ’ ಚಿತ್ರದ್ದು. ಕಳೆದ ಜುಲೈನಲ್ಲಿ ಬಿಡುಗಡೆಯಾದ ಈ ಟ್ರೇಲರ್ ಇದುವರೆಗೂ 90 ಪ್ಲಸ್​ ಮಿಲಿಯನ್​ ವೀಕ್ಷಣೆ ಪಡೆದಿದೆ. ಇನ್ನು, ಅಕ್ಷಯ್​ ಕುಮಾರ್​ ಅಭಿನಯದ ‘ಸೂಯರ್ವಂಶಿ’ ಚಿತ್ರದ ಟ್ರೇಲರ್​ 80 ಪ್ಲಸ್​ ವೀಕ್ಷಣೆಯೊಂದಿಗೆ ಎರಡನೆಯ ಸ್ಥಾನದಲ್ಲಿದೆ.

    'ಸೂರ್ಯವಂಶಿ' ದಾಖಲೆ ಮುರಿದ 'ಕೆಜಿಎಫ್​ 2'

    ಇದನ್ನೂ ಓದಿ: ಗರ್ಭಿಣಿ ಕರೀನಾ ಕಪೂರ್ ಈಗ ಮಿಸ್ ಮಾಡಿಕೊಳ್ಳುತ್ತಿರುವುದಾದರೂ ಏನು?!

    ಇದೀಗ, ‘ಕೆಜಿಎಫ್​ 2’ ಚಿತ್ರವು 90 ಪ್ಲಸ್​ ವೀಕ್ಷಣೆಯೊಂದಿಗೆ ‘ಸೂರ್ಯವಂಶಿ’ ಚಿತ್ರದ ದಾಖಲೆಯನ್ನು ಮುರಿದಿದೆ. ಸದ್ಯದಲ್ಲೇ ‘ದಿಲ್​ ಬೇಚಾರಾ’ ಚಿತ್ರದ ದಾಖಲೆಯನ್ನು ಮುರಿದಿದೆ. ಭಾರತೀಯ ಚಿತ್ರರಂಗದ ಪಾಲಿಗೆ ಇದೊಂದು ವಿಶಿಷ್ಟ ದಾಖಲೆಯಾಗಲಿದೆ. ಏಕೆಂದರೆ, ‘ದಿಲ್​ ಬೇಚಾರಾ’ ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು ಜುಲೈನಲ್ಲಿ. ‘ಸೂರ್ಯವಂಶಿ’ ಚಿತ್ರದ ಟ್ರೇಲರ್​ ಬಿಡಗುಡೆಯಾಗಿದ್ದು ಮಾರ್ಚ್​​ನಲ್ಲಿ. ಆದರೆ, ‘ಕೆಜಿಎಫ್​’ ಟೀಸರ್​ ಬಿಡುಗಡೆಯಾಗಿದ್ದು ಕೇವಲ 38 ಗಂಟೆಗಳ ಹಿಂದಷ್ಟೇ. ಹಾಗಾಗಿ ಅತೀ ಕಡಿಮೆಯಲ್ಲಿ ಇಷ್ಟೊಂದು ಸಂಖ್ಯೆಯ ವೀಕ್ಷಣೆ ಪಡೆದ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಕನ್ನಡದ ‘ಕೆಜಿಎಫ್​’ ಪಾತ್ರವಾಗಲಿದೆ ಎಂಬುದು ವಿಶೇಷ.

    ಕೆಜಿಎಫ್ 2 ಟೀಸರ್ ಸರಣಿ ದಾಖಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts