ರಜನಿಕಾಂತ್​ ಬಯೋಪಿಕ್​ನಲ್ಲಿ ಇವರೇ ಹೀರೋ!: ಕಾಲಿವುಡ್​ನಲ್ಲೊಂದು ಹೊಸ ಸಾಹಸ

Rajanikanth
Published on

ಚೆನ್ನೈ: ಭಾರತೀಯ ಸಿನಿಮಾದಲ್ಲಿ ಬಯೋಪಿಕ್​ಗಳು ಸಾಕಷ್ಟು ಸದ್ದು ಮಾಡುತ್ತಿವೆ. ಒಂದೊಂದು ಕ್ಷೇತ್ರದಲ್ಲಿ ತಮ್ಮದೇ ರೀತಿಯಲ್ಲಿ ಸಾಧನೆ ಮಾಡಿದ ಸಾಧಕರು, ಸಿನಿಮಾ ರೂಪದಲ್ಲಿ ತಮ್ಮ ಕಥೆಯನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಈಗಾಗಲೇ ಅಂಥ ಹಲವು ಬಯೋಪಿಕ್​ಗಳು ಈಗಾಗಲೇ ನಿರ್ಮಾಣ ಹಂತದಲ್ಲಿವೆ. ಈಗ ಹೊಸದಾಗಿ ಆ ಪಟ್ಟಿಗೆ ರಜನಿಕಾಂತ್​ ಸಹ ಸೇರ್ಪಡೆಗೊಳ್ಳಲಿದ್ದಾರೆ!

ನಿಜಕ್ಕೂ ಇದು ಅಚ್ಚರಿಯ ವಿಚಾರವೇ. ಕಾಲಿವುಡ್​ ಅಂಗಳದಲ್ಲಿ ರಜನಿ ಬಯೋಪಿಕ್​ ನಿರ್ಮಾಣದ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆ ಅಭಿಮಾನಿ ವಲಯದಲ್ಲಿ ದೊಡ್ಡ ನಿರೀಕ್ಷೆ ಮತ್ತು ಅಷ್ಟೇ ಕೌತುಕ ಮನೆ ಮಾಡಿದೆ. ರಜನಿ ಪಾತ್ರವನ್ನು ಮಾಡುವ ನಟ ಯಾರೆಂದು ಅಷ್ಟೇ ಬೆರಗುಗಣ್ಣಿನಿಂದಲೂ ನೋಡುತ್ತಿದ್ದಾರೆ. ಇದೀಗ ಆ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ರಜನಿಕಾಂತ್​ ಬಯೋಪಿಕ್​ನಲ್ಲಿ ನಟ ಮತ್ತು ರಜನಿ ಅಳಿಯ ಧನುಷ್​ ಕಾಣಿಸಿಕೊಳ್ಳಲಿದ್ದಾರಂತೆ.

ಸದ್ಯ ಈ ರೀತಿಯ ಸುದ್ದಿ ಕಾಲಿವುಡ್​ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಖ್ಯಾತ ನಿರ್ದೇಶಕ ಎನ್. ಲಿಂಗುಸ್ವಾಮಿ ಇಂಥದ್ದೊಂದು ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಈ ಹಿಂದೆ ವಿಶಾಲ್​ ಮತ್ತು ಕೀರ್ತಿ ಸುರೇಶ್​ ಜತೆಗೆ ಸಂಡಕೋಳಿ ಸಿನಿಮಾ ಮಾಡಿದ್ದ ಲಿಂಗುಸ್ವಾಮಿ, ಈ ಬಾರೀ ದೊಡ್ಡ ಪ್ರಾಜೆಕ್ಟ್ ಅನ್ನೇ ಹಿಡಿದು ಬಂದಿದ್ದಾರೆ. ಸದ್ಯದ ಮಟ್ಟಿಗೆ ಇದಿನ್ನು ಮಾತುಕತೆ ಹಂತದಲ್ಲಿದ್ದು, ಅಧಿಕೃತವಾದ ಒಪ್ಪಿಗೆ ಯಾರಿಂದಲೂ ಸಿಕ್ಕಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net