ಮುಂಬೈ: ದೀಪಾವಳಿ ಹಬ್ಬ ಎಂದರೆ ಅದು ಬೆಳಕಿನ ಹಬ್ಬ. ಎಲ್ಲೆಡೆ ಸಂಭ್ರಮ ಮತ್ತು ಸಡಗರ. ಅದರಲ್ಲೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ದೀಪಾವಳಿ ಹಬ್ಬದ ಆಚರಣೆ ತುಸು ಹೆಚ್ಚೆ ಜೋರಾಗಿರುತ್ತದೆ. ಅಂಬಾನಿ ಕುಟುಂಬವೂ ಅಮಿತಾಬ್ ಮನೆಗೆ ಆಗಮಿಸಿ ಹಬ್ಬವನ್ನು ಆಚರಣೆ ಮಾಡುತ್ತದೆ. ಆದರೆ, ಈ ಸಲದ ಅದ್ದೂರಿ ಆಚರಣೆಯನ್ನು ಬಚ್ಚನ್ ಕುಟುಂಬ ಕೈಬಿಟ್ಟಿದೆ.
ಇದನ್ನೂ ಓದಿ: ಆ್ಯಕ್ಟ್ 1978 ಬಿಡುಗಡೆಗೆ ದಿನಾಂಕ ನಿಗದಿ
ಅದಕ್ಕೆ ಕಾರಣ ಆ ಒಂದು ಸಾವು! ಹೌದು, ಇತ್ತೀಚೆಗಷ್ಟೇ ಅಮಿತಾಬ್ ಪುತ್ರಿ ಅಭಿಷೇಕ್ ಸಹೋದರಿ ಶ್ವೇತಾ ನಂದಾ ಅವರ ಅತ್ತೆ ನಿಧನರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಅಮಿತಾಬ್ ಮನೆಯಲ್ಲಿ ಈ ಸಲ ದೀಪಾವಳಿಯ ಆಚರಣೆಯನ್ನುಕೈಬಿಡಲು ನಿರ್ಧರಿಸಿದ್ದು, ಸರಳ ಆಚರಣೆಯ ಮೊರೆ ಹೋಗಿದ್ದಾರೆ.
‘ಹಬ್ಬದಾಚರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬ ಮುಖ್ಯ. ಕರೊನಾ ಪ್ರಮಾಣ ಕಡಿಮೆಯಾದರೂ, ಅದು ವಯಸ್ಸಾದವರಿಗೆ ಸಾಕಷ್ಟು ತೊಂದರೆಗೀಡು ಮಾಡುತ್ತಿದೆ. ಈ ವರ್ಷ ನಮ್ಮ ಮನೆಯಲ್ಲಿ ಸಾವಾಗಿರುವುದರಿಂದ ಹಬ್ಬದ ಆಚರಣೆಯನ್ನು ಕೈಬಿಟ್ಟಿದ್ದೇವೆ’ ಎಂದು ಸಂದರ್ಶನವೊಂದರಲ್ಲಿ ನಟ ಅಭಿಷೇಕ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಿಮಗೊಂದು ಸಿಹಿ ಸುದ್ದಿ … ಶುರುವಾಯ್ತು ವೆಬ್ಸೀರೀಸ್ನ ಚಿತ್ರೀಕರಣ
ಸದ್ಯ ಅನುರಾಗ್ ಬಸು ನಿರ್ದೇಶನದ ಲೂಡೋ ಚಿತ್ರದ ಪ್ರಚಾರದಲ್ಲಿ ಅಭಿಷೇಕ್ ಬಿಜಿಯಾಗಿದ್ದಾರೆ. ಅದರ ಜತೆಗೆ ಇನ್ನೂ ಹಲವು ಸಿನಿಮಾಗಳಲ್ಲಿ ಅವರು ತೊಡಗಿಸಿಕೊಳ್ಳುವುದರ ಜತೆಗೆ ಶೂಟಿಂಗ್ನಲ್ಲಿಯೂ ಭಾಗವಹಿಸಿದ್ದಾರೆ. (ಏಜೆನ್ಸೀಸ್)