HIRANYA Movie Review : ಸೇಡಿನ ಕಿಚ್ಚಲ್ಲಿ ಕರಗುವ ಕಲ್ಲು!

hiranya 2.jpg
Published on

ಚಿತ್ರ : ಹಿರಣ್ಯ
ನಿರ್ದೇಶನ : ಪ್ರವಿಣ್​ ಅವ್ಯುಕ್ತ
ನಿರ್ಮಾಣ: ವಿಘ್ನೇಶ್ವರ ಮತ್ತು ವಿಜಯ್​
ತಾರಾಗಣ: ರಾಜವರ್ಧನ್​, ರಿಹಾನಾ, ದಿಲೀಪ್​ ಶೆಟ್ಟಿ, ದಿವ್ಯಾ ಸುರೇಶ್​, ಹುಲಿ ಕಾರ್ತಿಕ್​, ಅರವಿಂದ್​ ರಾವ್​ ಮುಂತಾದವರು

| ಹರ್ಷವರ್ಧನ್​ ಬ್ಯಾಡನೂರು

ಕಾರು ಅಪಘಾತಕ್ಕೊಳಗಾದ ಗರ್ಭಿಣಿಗೆ ಸಹಾಯ ಮಾಡುವ ಹಿಟ್​ಮ್ಯಾನ್​ ರಾಣಾಗೆ (ರಾಜವರ್ಧನ್​), ಆ ಮಹಿಳೆ, "ಅಣ್ಣಾ, ನಮ್ಮ ಮಗೂಗೆ ನಿಮ್ಮ ಹೆಸರನ್ನಿಡಬೇಕು, ನಿಮ್ಮ ಹೆಸರೇನಣ್ಣಾ?' ಎಂದು ಕೇಳುತ್ತಾಳೆ. ಅದಕ್ಕೆ ರಾಣಾ, "ಯಾರಾದ್ರೂ ಸಾಧನೆ ಮಾಡಿರೋರ ಹೆಸರಿಡು, ಕಾಸಿಗೋಸ್ಕರ ಸಾಯಿಸೋ ಕ್ರಿಮಿನಲ್​ ಹೆಸರನ್ನಲ್ಲ' ಅಂತಾನೆ. ಕಾರಣ, ಹೆಣ ಉರುಳಿಸಿ, ಹಣ ಎಣಿಸೋ ಒಬ್ಬ ಹಿಟ್​ಮ್ಯಾನ್​ ಅರ್ಥಾತ್​ ಸುಪಾರಿ ಕಿಲ್ಲರ್​ ಈ ರಾಣಾ. ಆತನಿಗೆ ಒಂದು ಮಗುವನ್ನು ಕೊಲ್ಲುವ ಸುಪಾರಿ ಸಿಗುತ್ತದೆ. ಆ ಮಗುವಿನಿಂದಲೇ ರಾಣಾನ ಕಲ್ಲು ಮನಸ್ಸು ಕರಗುತ್ತದೆ. ಕೊಲ್ಲಲು ಬಂದವನೇ ಅದರ ರಕ್ಷಣೆಗಿಳಿಯುತ್ತಾನೆ. ಹಾಗಾದರೆ ಆ ಮಗುವನ್ನು ಕೊಲ್ಲಲು ಸುಪಾರಿ ಕೊಟ್ಟವರು ಯಾರು? ಅದಕ್ಕೆ ಕಾರಣವೇನು? ಅಲ್ಲೊಂದು ಪ್ರೇಮಕಥೆಯಿದೆ, ಸೇಡಿನ ಕಿಚ್ಚಿದೆ, ಚೇಸ್​, ಆ್ಯಕ್ಷನ್​, ಎಮೋಷನ್ಸ್​… ಹೀಗೆ ಹಂತಹಂತವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ.


ಸ್ಯಾಂಡಲ್​ವುಡ್​ನ ಆರಡಿ ಮೀರಿದ ಕಟೌಟ್​ಗಳಲ್ಲಿ ರಾಜವರ್ಧನ್​ ಕೂಡ ಒಬ್ಬರು. ಕಿಲ್ಲರ್​ ರಾಣಾ ಪಾತ್ರಕ್ಕೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಆ್ಯಕ್ಷನ್​ಗಳಲ್ಲಿ ಮಿಂಚಿದ್ದಾರೆ. ರಿಹಾನಾ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಹುಲಿ ಕಾರ್ತಿಕ್​ ಅಲ್ಲಲ್ಲಿ ನಗಿಸುತ್ತಾರೆ. ದಿವ್ಯಾ ಸುರೇಶ್​ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ. ಐಪಿಎಸ್​ ಅಧಿಕಾರಿ ದಿಲೀಪ್​ ಕುಮಾರ್​ ಪಾತ್ರದಲ್ಲಿ "ನೀನಾದೆ ನಾ' ಧಾರಾವಾಹಿ ಖ್ಯಾತಿಯ ದಿಲೀಪ್​ ಶೆಟ್ಟಿ ಸರ್​ಪೆಸ್​ ಪ್ಯಾಕೇಜ್​. ಚೊಚ್ಚಲ ಪ್ರಯತ್ನದಲ್ಲೇ ನಿರ್ದೇಶಕ ಪ್ರವಿಣ್​ ಒಂದೊಳ್ಳೆ ಕಮರ್ಷಿಯಲ್​ ಸಿನಿಮಾ ಮಾಡಿದ್ದಾರೆ. ಮೊದರ್ಲಧ ಕೆಲವೆಡೆ ನಿಧಾನ ಎನಿಸಿದರೂ ದ್ವೀತಿಯಾರ್ಧ ರ್ಟನ್​ ಟ್ವಿಸ್ಟ್​ಗಳ ಮೂಲಕ ಪ್ರೇಕ್ಷಕರನ್ನು ಹಿಡಿದು ಕೂರಿಸುತ್ತಾರೆ. ಜೂಡಾ ಸ್ಯಾಂಡಿ ಸಂಗೀತದ ಹಾಡುಗಳಲ್ಲಿ "ಪದೇ ಪದೆ' ಇಷ್ಟವಾಗುತ್ತದೆ. ಯೋಗೇಶ್ವರನ್​ ಆ್ಯಕ್ಷನ್​ ಕೆಮ್​ ಡ್ರಾಮಾ ಕಥೆಯನ್ನು ಕ್ಯಾಮರಾದಲ್ಲಿ ರಿಚ್ಚಾಗಿ ಸೆರೆಹಿಡಿದಿದ್ದಾರೆ. ಹೀಗಾಗಿಯೇ "ಹಿರಣ್ಯ' ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net