

‘777 ಚಾರ್ಲಿ’ ಚಿತ್ರವನ್ನು ಹಲವು ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ಜಾನ್ ಅಬ್ರಹಾಂ, ಬೋನಿ ಕಪೂರ್ ಮುಂತಾದವರು ರಕ್ಷಿತ್ ಮತ್ತು ಚಿತ್ರತಂಡದವರಿಗೆ ಫೋನ್ ಮೂಲಕ, ಸೋಷಿಯಲ್ ಮೂಲಕ ಶುಭ ಹಾರೈಸಿದ್ದಾರೆ. ಈಗ ರಜನಿಕಾಂತ್ ಸಹ ಚಿತ್ರ ನೋಡಿ ರಕ್ಷಿತ್ಗೆ ಫೋನ್ ಮಾಡಿ ಮಾತನಾಡಿದರಂತೆ. ಈ ವಿಷಯವನ್ನು ಸ್ವತಃ ರಕ್ಷಿತ್ ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಕ್ಷಿತ್,
‘ರಜನಿ ಸಾರ್ ಫೋನ್ ಮಾಡಿದ್ದರು. ‘777 ಚಾರ್ಲಿ’ ನೋಡಿ ಅವರು ಬಹಳ ಖುಷಿ ಪಟ್ಟಿದ್ದಾರೆ. ಚಿತ್ರದ ಮೇಕಿಂಗ್, ಅದರಲ್ಲಿ ಅಡಗಿರುವ ಒಳಾರ್ಥಗಳು ಮತ್ತು ಕ್ಲೈಮ್ಯಾಕ್ಸ್ ಮೆಚ್ಚಿಕೊಂಡು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸೂಪರ್ಸ್ಟಾರ್ ಒಬ್ಬರಿಂದ ಅಂತಹ ಮಾತುಗಳನ್ನು ಕೇಳಿದ್ದು ಬಹಳ ಖುಷಿಯಾಯಿತು. ಧನ್ಯವಾದಗಳು ರಜನಿ ಸಾರ್’ ಎಂದು ರಕ್ಷಿತ್ ಟ್ವೀಟ್ ಮಾಡಿದ್ದಾರೆ.