ಎರಡು ವರ್ಷಗಳ ನಂತರ ಮೊದಲ ಬಾರಿಗೆ ಮಾಸ್ಕ್​ ಇಲ್ಲದೆ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ ಗಂಡ

Raj Kundra Without Mask
Published on

ಮುಂಬೈ: ಬೆತ್ತಲೆ ಚಿತ್ರಗಳ ಕೇಸ್​ನಲ್ಲಿ ಜೈಲುಶಿಕ್ಷೆ ಅನುಭವಿಸಿ ಬಂದ ಶಿಲ್ಪಾ ಶೆಟ್ಟಿ ಗಂಡ ರಾಜ್​ ಕುಂದ್ರಾ, ಆ ನಂತರ ಎಲ್ಲೇ ಹೋದರೂ ತರಹೇವಾರಿ ಮಾಸ್ಕ್​ ಧರಿಸಿಯೇ ಹೋಗುತ್ತಿದ್ದರು. ಈಗ ಎರಡು ವರ್ಷಗಳ ನಂತರ ಅವರು ಇದೇ ಮೊದಲ ಬಾರಿಗೆ ಮಾಸ್ಕ್​ ಇಲ್ಲದೆ ಕಾಣಿಸಿಕೊಂಡಿದ್ದಾರೆ.

ಬೆತ್ತಲೆ ಚಿತ್ರಗಳ ಕೇಸ್​ನಲ್ಲಿ ಜೈಲಿಗೆ ಹೋಗಿ ಬಂದಿದ್ದ ರಾಜ್​, ಸಾಕಷ್ಟು ಮುಜುಗರ ಅನುಭವಿಸಿದ್ದರು. ಅದರಲ್ಲೂ ಮುಂಬೈನಲ್ಲಿ ಅವರು ಹೋಗಿ ಬಂದ ಕಡೆ ಎಲ್ಲಾ ಪಾಪರಾಜಿಗಳು ಅವರ ಬೆನ್ನು ಹತ್ತುತ್ತಿದ್ದರು.

ಅವರಿಂದ ತಪ್ಪಿಸಿಕೊಳ್ಳುವುದಕ್ಕೆ ರಾಜ್​ ಕುಂದ್ರಾ, ಆಫೀಸ್​ ಇರಲಿ, ಪಾರ್ಟಿ ಇರಲಿ ಅಥವಾ ಯಾವುದೇ ಕಾರ್ಯಕ್ರಮವಾದರೂ ಮುಖಕ್ಕೆ ಮಾಸ್ಕ್​ ಇಲ್ಲದೆ

ಈ ಕುರಿತು ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ಅವರು, 'ನಾನು ಮಾಸ್ಕ್​ ಧರಿಸುವುದು ಸ್ನೇಹಿತರಿಂದ ದೂರ ಇರುವುದಕ್ಕಲ್ಲ, ಪಾಪರಾಜಿಗಳಿಂದ ದೂರ ಇರುವುದಕ್ಕೆ. ಮಾಧ್ಯಮದವರು ಸಾಕಷ್ಟು ಕಿರುಕುಳ ನೀಡುವುದರಿಂದ ಮಾಸ್ಕ್​ ಧರಿಸಬೇಕಾಗಿದೆ. ನನಗೆ ಅವರ ನಡೆಯಿಂದ ಸಾಕಷ್ಟು ನೋವಾಗಿದೆ. ಮೀಡಿಯಾದವರು ನ್ಯಾಯಾಲಯಕ್ಕೂ ಮೀಗಿಲಲ್ಲ' ಎಂದು ಹೇಳಿಕೊಂಡಿದ್ದರು.

ಆದರೆ, ಇತ್ತೀಚೆಗೆ ರಾಜ್​ ಕುಂದ್ರಾ, ತಮ್ಮ ನಾದಿನಿ ಶಮಿತಾ ಶೆಟ್ಟಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ರಾಜ್​ ಹಾಜರಿದ್ದರು. ಆದರೆ, ಆ ಸಮಾರಂಭಕ್ಕೆ ಬರುವಾಗ ಯಾವುದೇ ಮಾಸ್ಕ್​ ಹಾಕದೇ, ಬರೀ ಹಳದಿ ಕೂಲಿಂಗ್​ ಗ್ಲಾಸ್​ವೊಂದನ್ನು ಧರಿಸಿ ಬಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net