

ಬೆಂಗಳೂರು: ಮೇಘನಾ ರಾಜ್ ಸರ್ಜಾ ಅಭಿನಯದ 'ತತ್ಸಮ ತದ್ಭವ' ಚಿತ್ರದ ಪೋಸ್ಟರ್ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಘೋಷಣೆಯಾದಾಗ, ಮೇಘನಾ ಹೊರತುಪಡಿಸಿದರೆ, ಬೇರೆ ಯಾರೆಲ್ಲಾ ನಟಿಸಿದ್ದಾರೆ ಎಂಬ ವಿಷಯವನ್ನು ಚಿತ್ರತಂಡದವರು ಬಿಟ್ಟುಕೊಟ್ಟಿರಲಿಲ್ಲ. ಈಗ ಚಿತ್ರತಂಡದವರು ಒಬ್ಬೊಬ್ಬ ನಟ-ನಟಿಯರ ಹೆಸರನ್ನ ಬಹಿರಂಗಗೊಳಿಸುತ್ತಿದ್ದಾರೆ.
ಪ್ರಮುಖವಾಗಿ ಬಾಲಾಜಿ ಮನೋಹರ್, ಮಹತಿ, ಅರವಿಂದ್ ಅಯ್ಯರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಬಾಲಾಜಿ ಮನೋಹರ್, 'ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಲು ಸಂತೋಷವಾಗುತ್ತಿದೆ. ತಮ್ಮ ಕಥೆಯನ್ನು ತೆರೆ ಮೇಲೆ ತರಲು ಇರಬೇಕಾದ ಧೈರ್ಯ ಮತ್ತು ಅದನ್ನು ಪ್ರಸ್ತುತಪಡಿಸುವ ಕಲೆ ಈ ಸಿನೆಮಾದ ಯುವ ನಿರ್ದೇಶಕರಿಗಿದೆ. ಒಟ್ಟಿನಲ್ಲಿ ಈ ಪಾತ್ರ ಸಂತಸ ತಂದಿದೆ' ಎಂದು ಹೇಳಿಕೊಂಡಿದ್ದಾರೆ.
'ತತ್ಸಮ ತದ್ಭವ' ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ ಈ ಚಿತ್ರಕ್ಕಿದೆ.