'ಹೌ ನಾಟ್​ ಟು ಮೇಕ್​ ಮನಿ' ರಾಜ್​ ಕುಂದ್ರ ಬರೆದಿರುವ ಕಾದಂಬರಿ ಈಗ ವೈರಲ್!

raj
Published on

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ಈಗಾಗಲೇ ಅನೇಕ ಪ್ರಕರಣಗಳಲ್ಲಿ, ವಿವಾದಗಳಲ್ಲಿ ಸಿಲುಕಿದ್ದ ರಾಜ್​ ಕುಂದ್ರಾ ಬಗ್ಗೆ ಅನೇಕರು ಅನೇಕ ರೀತಿಯಲ್ಲಿ ಚರ್ಚೆ ನಡೆಸಲು ಆರಂಭಿಸಿದ್ದಾರೆ. ಅವರು ಈ ಹಿಂದೆ ಬರೆದಿದ್ದ ಕಾದಂಬರಿಯೂ ಇದೀಗ ವೈರಲ್ ಆಗಿದೆ.

ರಾಜ್ ಕುಂದ್ರಾ ಅವರು 2013ರಲ್ಲಿ 'ಹೌ ಟು ನಾಟ್ ಮೇಕ್ ಮನಿ' ಹೆಸರಿನ ಕಾದಂಬರಿಯೊಂದನ್ನು ಬರೆದಿದ್ದರು. ಒಂದು ನಿಜ ಘಟನೆಯನ್ನಾಧರಿಸಿ ಆ ಕಾದಂಬರಿ ಬರೆದಿದ್ದಾಗಿ ಹೇಳಲಾಗಿತ್ತು. ಇದೀಗ ಅವರು ಮಾಡಬಾರದ ಕೆಲಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿರುವ ಸಮದಯಲ್ಲಿ ಅವರ ಕಾದಂಬರಿಯ ಹೆಸರನ್ನೇ ಅವರಿಗೆ ಜನರು ಹೇಳಲಾರಂಭಿಸಿದ್ದಾರೆ.

ಟ್ವಿಟ್ಟರ್​ನಲ್ಲಿ ರಾಜ್​ ಕುಂದ್ರಾ ಅವರ ಆ ಕಾದಂಬರಿಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಯಾರು ಯಾವ ರೀತಿಯ ಪುಸ್ತಕ ಬರೆದಿದ್ದಾರೆ ನೀವೇ ನೋಡಿ ಎಂದು ಅನೇಕರು ಹೇಳುತ್ತಿದ್ದರೆ ಇನ್ನು ಕೆಲವರು ಅವರು ಪುಸ್ತಕ ಬರೆದಾಗ ಏನಕ್ಕಾಗಿ ಬರೆದಿದ್ದಾರೆ ಎಂದು ಅರ್ಥ ಆಗಿರಲಿಲ್ಲ ಆದರೆ ಈಗ ಅರ್ಥ ಆಯಿತು ಎಂದು ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net