'ನನ್ನ ಗಂಡ ಅಶ್ಲೀಲ ವಿಡಿಯೋ ಹಾಕುತ್ತಿರಲಿಲ್ಲ, ಶೃಂಗಾರದ ವಿಡಿಯೋ ಚಿತ್ರೀಕರಿಸ್ತಿದ್ರು'

shilpa
Published on

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣದ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ಈ ವಿಚಾರದಲ್ಲಿ ನಟಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ನಟಿ ಹೇಳಿದ್ದಾರೆ. ಹಾಗೆಯೇ ರಾಜ್​ ಕುಂದ್ರಾ ಅಶ್ಲೀಲ ವಿಡಿಯೋಗಳನ್ನು ತಯಾರಿಸುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಪ್ರಕರಣದ ಸಂಬಂಧ ಮುಂಬೈ ಕ್ರೈಂ ವಿಭಾಗದ ಪೊಲೀಸರು ಶಿಲ್ಪಾ ಅವರನ್ನು ಸುಮಾರು ಆರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ತಾನು ಗಂಡನ ಬಿಸಿನೆಸ್​ನಲ್ಲಿ ತಲೆ ಹಾಕಿರಲಿಲ್ಲ ಎಂದಿರುವ ನಟಿ ಅದರಿಂದ ಯಾವುದೇ ಲಾಭವನ್ನು ತಾನು ಪಡೆಯುತ್ತಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ನನ್ನ ಗಂಡ ಹಾಟ್​ಶಾಟ್ ಆ್ಯಪ್​ಗೆ ಹಾಕುತ್ತಿದ್ದದ್ದು ಅಶ್ಲೀಲ ವಿಡಿಯೋಗಳನ್ನಲ್ಲ. ಶೃಂಗಾರದ ವಿಡಿಯೋಗಳನ್ನು ಹಾಕುತ್ತಿದ್ದರು. ಅದರಲ್ಲಿ ಯಾವ ರೀತಿಯ ವಿಡಿಯೋಗಳಿರುತ್ತಿದ್ದವು ಎನ್ನುವುದಕ್ಕೆ ನನಗೆ ನಿಖರವಾದ ಮಾಹಿತಿಯಿಲ್ಲ. ಆದರೆ ಹಲವಾರು ಒಟಿಟಿಗಳಲ್ಲಿ ಹೆಚ್ಚು ಅಶ್ಲೀಲ ಎನಿಸುವ ವಿಡಿಯೋಗಳು ಹರಿದಾಡುತ್ತಿವೆ ಎಂದು ಅವರು ಹೇಳಿದ್ದಾರೆ. ನಟಿಯ ಹೇಳಿಕೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net