ಅಲಾ ನವೀನಾ...; ಕಲರ್​ಫುಲ್ ಹಾಡಿನಲ್ಲಿ ರಾಜ್ ಬಿ. ಶೆಟ್ಟಿ

Raj B Shetty
Published on

ಬೆಂಗಳೂರು: ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಮೂಲಕ ತಮ್ಮ ಮತ್ತೊಂದು ಚಹರೆ ತೋರಿಸಿದ್ದ ನಟ, ನಿರ್ದೇಶಕ ರಾಜ್ ಶೆಟ್ಟಿ, ಇದೀಗ ಕಲರ್​ಫುಲ್ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ‘ಅಲಾ ... ನವೀನಾ’ ಹೆಸರಿನ ಆಲ್ಬಂ ಹಾಡಿನಲ್ಲಿ ವಿಶೇಷವಾಗಿ ಅವರನ್ನು ತೋರಿಸಿದ್ದಾರೆ ನಿರ್ದೇಶಕ ನಾಗಾರ್ಜುನ್ ಶರ್ಮಾ.

ಈ ಹಿಂದೆ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ‘ಹ್ಯಾಂಡ್ಸ್ ಅಪ್ ...’ ಹಾಡಿಗೆ ಸಾಹಿತ್ಯ ಬರೆದಿದ್ದ ನಾಗಾರ್ಜುನ್, ಇದೀಗ ‘ಅಲಾ ನವೀನಾ ...’ ಸಿಂಗಲ್ ಮೂಲಕ ಎಂಟ್ರಿಯಾಗುತ್ತಿದ್ದಾರೆ. ‘‘ಅಲಾ ನವೀನಾ ...’ ಅಂದ ಕೂಡಲೇ ಇದು ಕೇವಲ ನವೀನನ ಕಥೆ ಅಲ್ಲ. ಇದು ಎಲ್ಲರಿಗೂ ಕನೆಕ್ಟ್ ಆಗುವಂಥ ಸಾಹಿತ್ಯವುಳ್ಳ ಹಾಡು. ರಾಜ್ ಶೆಟ್ಟಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರೆ, ಅಥರ್ವ ಮತ್ತು ಸ್ಪೂರ್ತಿ ಉಡಿಮನೆ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕನ್ನಡದ ಜತೆಗೆ ತಮಿಳಿನಲ್ಲಿಯೂ ಹಾಡು ಮೂಡಿಬಂದಿದೆ. ಡಿ. 20ರಂದು ರಕ್ಷಿತ್ ಶೆಟ್ಟಿ ಅವರ ಪರಮ್ವಾ ಮ್ಯೂಸಿಕ್​ನಲ್ಲಿ ಹಾಡು ಬಿಡುಗಡೆ ಆಗಲಿದೆ’ ಎನ್ನುತ್ತಾರೆ.

ಅಂಥೋನಿ ದಾಸನ್ ಈ ಹಾಡಿಗೆ ಧ್ವನಿಯಾಗಿದ್ದು, ಆನಂದ್ ರಾಜಾ ಸಂಗೀತ ನೀಡಿದ್ದಾರೆ. ಮುರುಗ ಮಾಸ್ಟರ್ ನೃತ್ಯ ನಿರ್ದೇಶನವಿದೆ. ವಿಶ್ವಾಸ್ ಛಾಯಾಗ್ರಹಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net