ಭೂಮಿಯಿಂದ 3 ಸಲ ಕೇಳಿ ಬಂತು ಭಾರಿ ಶಬ್ದ; ಭೂಕಂಪದ ಅನುಭವ, ಗಡಿ ಜಿಲ್ಲೆ ಬೀದರ್​ನಲ್ಲಿ ಗಡಿಬಿಡಿ..

Eq
ಭೂಮಿಯಿಂದ ಕೇಳಿ ಬಂದ ಸದ್ದು ಹಾಗೂ ಭೂಕಂಪನದ ಅನುಭವಕ್ಕೆ ಬೆದರಿ ಮನೆಯಿಂದ ಹೊರಬಂದಿರುವ ಜನರು
Published on

ಬೀದರ್​: ಗಡಿ ಜಿಲ್ಲೆ ಬೀದರ್​ನಲ್ಲಿ ಭೂಮಿಯಿಂದ ಮೂರು ಸಲ ಭಾರಿ ಶಬ್ದ ಕೇಳಿಬಂದಿದ್ದಲ್ಲದೆ, ಭೂಕಂಪದ ಅನುಭವವೂ ಆಗಿದ್ದು, ಜನರು ಗಡಿಬಿಡಿಯಲ್ಲಿ ಮನೆಯಿಂದ ಹೊರಬಂದು ರಸ್ತೆಗಳಲ್ಲಿ ನಿಂತು ಆತಂಕದಲ್ಲಿ ಇರುವುದು ಕಂಡುಬಂದಿದೆ.

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕೊಡಂಬಲ್ ಗ್ರಾಮದಲ್ಲಿ ಈ ಭೂಕಂಪನದ ಅನುಭವವಾಗಿದೆ. ಸಂಜೆ ಆರು ಗಂಟೆ ಸುಮಾರಿಗೆ ಭೂಮಿಯಿಂದ ಮೂರು ಸಲ ಭಾರಿ ಶಬ್ದ ಬಂದಿದೆ ಎಂದು ಜನರು ತಮಗಾದ ಅನುಭವ ಹೇಳಿಕೊಂಡಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಹೀಗೆ ಭೂಮಿಯಿಂದ ಸದ್ದು ಕೇಳಿಸುತ್ತಿದ್ದಂತೆ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಈ ಹಿಂದೆ ಇದೇ ತಾಲೂಕಿನ ಹುಣಸನಾಳು ಮತ್ತು ಹೊಸಳ್ಳಿ ಗ್ರಾಮದಲ್ಲಿ ಇಂಥ ಶಬ್ದಗಳು ಕೇಳಿಬಂದಿದ್ದವು. ಇದೀಗ ಕೊಡಂಬಲ್​ನಲ್ಲಿನ ಈ ವಿದ್ಯಮಾನ ಜನರನ್ನು ಆತಂಕಕ್ಕೀಡು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net