ಏನೇ ತೊಂದರೆಯಾದ್ರು ಅದು ರಿಷಭ್​​ಗೆ ಅಲ್ವಾ?: ನಟ ರಾಜ್​​ ಬಿ.ಶೆಟ್ಟಿ

raj b shetty
Published on

ಬೆಂಗಳೂರು: ವಿಜಯವಾಣಿ (Vijayavani) ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ (Raj B Shetty), ಕಾಂತಾರ ಚಿತ್ರದಲ್ಲಿ ರಿಷಭ್​ ಶೆಟ್ಟಿ ಅವರೊಟ್ಟಿಗೆ ಕಳೆದ ಒಂದಷ್ಟು ಅನುಭವಗಳನ್ನು ಮೆಲುಕು ಹಾಕಿ ಮಾತನಾಡಿದ್ದಾರೆ.

"ಕಾಂತಾರ (Kantara) ಚಿತ್ರದ ಪ್ರಾರಂಭದಲ್ಲಿ ಬರುವ ರಾಜನ ಕಥೆಯ ಬರವಣಿಗೆ, ಆದಾದ ನಂತರದಲ್ಲಿ ಕೆಲವು ಬಹಳ ಮುಖ್ಯವಾದ ಡೈಲಾಗ್​ಗಳನ್ನು ಬರೆದಿದ್ದೀನಿ. ಜತೆಗೆ ಕೋಲ ಬಗ್ಗೆ ಸಹಾಯ ಮಾಡಲು ಹೆಚ್ಚಿನ ಸಮಯ ರಿಷಬ್​​ ಅವರೊಟ್ಟಿಗೆ ಶೂಟಿಂಗ್​ ಸೆಟ್​​ನಲ್ಲಿ ಕಳೆದಿದ್ದೇನೆ. ಅದರ ಸಂಪೂರ್ಣ ಚಿತ್ರೀಕರಣ ಸಮಯದಲ್ಲಿ ನಾನು ಅಲ್ಲೇ ಇದ್ದೆ" ಎಂದು ಹೇಳಿದರು.

"ರಿಷಭ್​​ ಅವರು ಅಲ್ಲಿನ ಸಂಸ್ಕೃತಿಗೆ ಅಷ್ಟು ಹೊಂದಿಕೊಂಡಿರಲಿಲ್ಲ! ದೈವದ ನೃತ್ಯಗಳ ಬಗ್ಗೆ ಅವರಿಗೆ ಗೊತ್ತಿತ್ತು, ಆದ್ರೆ ಖಚಿತವಾಗಿರಲಿಲ್ಲ. ಆ ವೇಷಗಳನ್ನು ತೊಟ್ಟು ಕುಣಿಯುವುದು ಬಹಳ ಕಷ್ಟವಿದೆ. ಮೇಕಪ್ ಇಂದ ಹಿಡಿದು ಹಲವು ವಿಷಯಗಳನ್ನು ನಾನು ನೋಡಿಕೊಂಡೆ. ನನಗೆ ಬಹಳ ಖುಷಿ ಕೊಟ್ಟಿದ್ದು ಏನು ಎಂದರೆ, ಮೊದಲ ಬಾರಿಗೆ ನನ್ನ ಸಿನಿಮಾದ ಸೆಟ್ಟಿನಲ್ಲಿ ಕೆಲಸ ಮಾಡಿದ್ದು ಬಿಟ್ಟರೆ ಬೇರೆ ಯಾವ ಚಿತ್ರದ ಸೆಟ್ಟಿಗೂ ಹೋಗಿರಲಿಲ್ಲ. ಆದ್ರೆ ರಿಷಭ್​ ಅವರ ಕಾಂತಾರ ಸೆಟ್ಟಿಗೆ ಹೋದಾಗ ಬಹಳ ಸ್ವತಂತ್ರ ಎಂಬ ಭಾವನೆ ಮೂಡಿತು" ಎಂದು ಹೇಳಿದರು.

ಕಾಂತಾರದಲ್ಲಿ ರಿಷಭ್​ ಮತ್ತು ರಾಜ್​​ ಬಿ.ಶೆಟ್ಟಿ ಅವರ ಸಂಗಮ ಹೇಗಿತ್ತು ಎಂಬುದರ ಬಗ್ಗೆ ಮತ್ತಷ್ಟು ಕುತೂಹಲಕಾರಿ ಸಂಗತಿಗಳು ತಿಳಿಯಲು ಕೆಳಗೆ ಕೊಟ್ಟಿರುವ ಯೂಟ್ಯೂಬ್ ಲಿಂಕ್​ ಅನ್ನು ಕ್ಲಿಕ್ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net