ಬೈಯಪ್ಪನಹಳ್ಳಿ ಮಾದರಿಯಲ್ಲಿ ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ಧಿ : ಪ್ರತಾಪ್ ಸಿಂಹ

Pratap Simha
Published on

ಮೈಸೂರು: ಬೈಯಪ್ಪನಹಳ್ಳಿ ಮಾದರಿಯಲ್ಲಿ ಮೈಸೂರು ರೈಲ್ವೆ ನಿಲ್ದಾಣವನ್ನು 750 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗು ವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದ ನೈಋತ್ಯ ರೈಲ್ವೆ ಮೈಸೂರು ವಿಭಾಗೀಯ ಕಚೇರಿಯಲ್ಲಿ ಬುಧವಾರ ಗತಿಶಕ್ತಿ ವಿಭಾಗ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳೊ ಂದಿಗೆ ರೈಲ್ವೆ ಇಲಾಖೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 750 ಕೋಟಿ ರೂ.ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ವಿಸ್ತರಣೆ, ಹೆಚ್ಚುವರಿ ಟಿಕೆಟ್ ಕೌಂಟರ್ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾ ಗುವುದು. ಈ ಪೈಕಿ ರೈಲ್ವೆ ನಿಲ್ದಾಣ ವಿಸ್ತರಣೆ ಕಾಮಗಾರಿಗೆ 346 ಕೋಟಿ ರೂ.ವಿನಿಯೋಗಿಸಲಾಗುವುದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ನವೆಂಬರ್ ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಿ ಮೂರು ವರ್ಷಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾ ಗುವುದು ಎಂದರು.

ಚಾಮರಾಜ ಒಡೆಯರ್ 1870 ರಲ್ಲಿ ರಾಜ್ಯದಲ್ಲಿ ರೈಲ್ವೆ ಟ್ರಾೃಕ್ ನಿರ್ಮಾಣ ಮಾಡಿದರು. ಹೀಗಾಗಿ ರೈಲ್ವೆ ನಿಲ್ದಾಣದ 3ನೇ ಪ್ರವೇಶದ್ವಾರದಲ್ಲಿ ಚಾಮರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಅಲ್ಲದೆ, ಮೈಸೂರು ರೈಲ್ವೆ ನಿಲ್ದಾಣಕ್ಕೆ ಚಾಮರಾಜ ಒಡೆಯರ್ ಹೆಸರು ಇಡಲಾಗುವುದು. ರೈಲು ನಿಲ್ದಾಣದಲ್ಲಿ 6 ಪ್ಲಾಟ್‌ಫಾರ್ಮ್ ಇದ್ದು, ಹೆಚ್ಚುವರಿಯಾಗಿ 3 ಪ್ಲಾಟ್‌ಫಾರ್ಮ್, 4 ಫಿಟ್‌ಲೈನ್, 4 ಸಬ್‌ಲೈನ್ ನಿರ್ಮಾಣ ಮಾಡಲಾಗುವುದು. ಅಲ್ಲದೆ, 16 ರಿಂದ 20 ಕೊಠಡಿ ಇರುವ ಒಂದು ಫ್ಲಾಜಾ, ಸೂಪರ್ ಮಾರ್ಕೆಟ್, ಹೋಟೆಲ್ ಮೊದಲಾದ ವ್ಯವಸ್ಥೆ ಮಾಡಲಾಗುವುದು. ಬೈಯಪ್ಪನಹಳ್ಳಿ, ಯಂಶವಂತಪುರ ಟರ್ಮಿನಲ್ ಮಾದರಿಯಲ್ಲಿ 3ನೇ ಪ್ರವೇಶ ದ್ವಾರ (ಸಿಎಫ್‌ಟಿಆರ್‌ಐ ಭಾಗ) ನಿರ್ಮಿಸಲಾಗುವುದು. ಮುಂದಿನ 2 ತಿಂಗಳಲ್ಲಿ ಡಿಪಿಆರ್ ಸಿದ್ಧಪಡಿಸಲಾಗುವುದು. ಇದಕ್ಕೆ ಹೆಚ್ಚುವರಿಯಾಗಿ 200 ಕೋಟಿ ರೂ.ವೆಚ್ಚವಾಗಲಿದೆ ಎಂದು ತಿಳಿಸಿದರು.

ಕೆಆರ್‌ಎಸ್ ರಸ್ತೆ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣದ ವಿನ್ಯಾಸವು ಅನುಮೋದನೆ ಹಂತದಲ್ಲಿದೆ. ಕ್ರಾಫರ್ಡ್‌ಹಾಲ್ ಪಕ್ಕದಲ್ಲಿರುವ ರೈಲ್ವೆ ಹಳಿ ಬಳಿಯಲ್ಲಿ ಶೀಘ್ರವೇ ಅಂಡರ್‌ಪಾಸ್ ಕಾಮಗಾರಿ ಕೈಗೊಳ್ಳಲಾಗುವುದು. ಮೈಸೂರು-ಚಾಮರಾಜನಗರ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಕೈಗೊಳ್ಳಲು ಉಂಟಾಗಿರುವ ತೊಡಕು ನಿವಾರಿಸಲು ಮೈಸೂರು ವಿವಾನ ನಿಲ್ದಾಣದ ಬಳಿ 1.50 ಕಿ.ಮೀ. ತಿರುವು ಪಡೆದು ಪ್ರತ್ಯೇಕ ಟ್ರಾೃಕ್ ನಿರ್ಮಿಸಲು ಚಿಂತಿಸಲಾಗುತ್ತಿದೆ ಎಂದರು. ಸಭೆಯಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್‌ವಾಲ್, ಗತಿಶಕ್ತಿ ಯೋಜನೆ ಉಸ್ತುವಾರಿ ವಿಷ್ಣುದಾಸ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net