ಇವತ್ತೂ ಸಿಗಲಿಲ್ಲ ರಿಲೀಫ್​ ... ಇನ್ನೂ ಮೂರು ದಿನಗಳ ಕಾಲ ರಾಗಿಣಿ ಜೈಲುವಾಸ

Ragini Dwivedi - Final
Published on

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್​ವುಡ್​ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಸೆಪ್ಟೆಂಬರ್​ 19ಕ್ಕೆ ಮತ್ತೆ ವಿಚಾರಣೆ ನಡೆಯಲಿದ್ದು, ಅಂದು ರಾಗಿಣಿಗೆ ಬೇಲ್​ ಸಿಗುತ್ತದೋ ಇಲ್ಲವೋ ಎಂಬುದು ಗೊತ್ತಾಗುವ ಸಾಧ್ಯತೆ ಇದೆ.

ಇದಕ್ಕೂ ಮುನ್ನ, ಸೋಮವಾರ (ಸೆಪ್ಟೆಂಬರ್​ 14) ರಾಗಿಣಿಗೆ 1ನೇ ಎಸಿಎಂಎಂ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಈ ಸಂಬಂಧ, ರಾಗಿಣಿ ಪರ ವಕೀಲರು ಮಧ್ಯಂತರ ಜಾಮೀನು ಅರ್ಜಿ ಹಾಕಿದ್ದರು. ಇಂದು ಅರ್ಜಿ ನ್ಯಾಯಾಲಯದ ಮುಂದೆ ಬಂದಾಗ, ನ್ಯಾಯಲಯವರು ಸೆಪ್ಟೆಂಬರ್ 19ಕ್ಕೆ ಮುಂದೂಡಿ ಆದೇಶಿಸಿದೆ.

ತನಿಖೆ ಪ್ರಗತಿಯಲ್ಲಿರುವುದರಿಂದ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕೆಂದು ಸಿಸಿಬಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಮೂರು ದಿನಗಳ ಕಾಲ ಮುಂದೂಡಿದ್ದು, ಇದರಿಂದ ರಾಗಿಣಿ ಇನ್ನೂ ಮೂರು ದಿನಗಳ ಕಾಲ ಜೈಲಿನಲ್ಲೇ ಮುಂದುವರೆಯುವುದು ಖಚಿತವಾಗಿದೆ.

ಇನ್ನು ಇದೇ ಪ್ರಕರಣದಲ್ಲಿ ಸಿಸಿಬಿ ಕಸ್ಟಡಿಯಲ್ಲಿರುವ ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ಅವರ ಕಸ್ಟಡಿ ಇಂದಿಗೆ ಕೊನೆಯಾಗಲಿದ್ದು ಆಕೆಯನ್ನು ಇಂದು ಪೋಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net