ಇದು ನಮ್ಮೆಲ್ಲರ ಕೆಲಸ ಎಂದು ರಾಗಿಣಿ ಹೇಳಿದ್ದ್ಯಾಕೆ?

Ragini - Final
Published on

ಬೆಂಗಳೂರು: ರಕ್ತ ಮತ್ತು ಪ್ಲಾಸ್ಮಾ ಕೊರತೆ ಇರುವುದರಿಂದ, ಎಲ್ಲರೂ ಮುಂದೆ ಬಂದು ರಕ್ತದಾನ ಮಾಡಿ ಎಂದು ನಟಿ ರಾಗಿಣಿ ದ್ವಿವೇದಿ ಕರೆ ನೀಡಿದ್ದಾರೆ.

ವಾಸವಿ ಗ್ರೂಪ್​ ಮತ್ತು ಲಯನ್ಸ್​ ಇಂಟರ್​ನ್ಯಾಷನಲ್​ ಜಂಟಿಯಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ರಾಗಿಣಿ, ರಕ್ತದಾನ ಮಾಡುವುದರ ಜತೆಗೆ ಇತರರಿಗೂ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನಾನು ಆಗಾಗ ರಕ್ತದಾನ ಮಾಡುತ್ತಲೇ ಇರುತ್ತೇನೆ. ಕೆಲವು ತಿಂಗಳ ಹಿಂದೆಯೂ ರಕ್ತದಾನ ಮಾಡಿದ್ದೆ. ನನ್ನ ಪ್ರಕಾರ ಇದೊಂದು ಅದ್ಭುತವಾದ ಕೆಲಸ. ಅದರಲ್ಲೂ ಈ ಸಮಯದಲ್ಲಿ ರಕ್ತದ ಅವಶ್ಯಕತೆ ಇದೆ. ಹಾಗಾಗಿ, ಎಲ್ಲರೂ ಮುಂದೆ ಬಂದು ರಕ್ತದಾನ ಮಾಡಿ. ಇದು ನಮ್ಮೆಲ್ಲರ ಕೆಲಸವೂ ಹೌದು ಎಂದು ರಾಗಿಣಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net