ಆಲ್ಬಂನಲ್ಲಿ ರಾಗಿಣಿ; ಇನ್ನೂ ಎರಡು ಹಾಡುಗಳಿಗೆ ಸದ್ಯದಲ್ಲೇ ಚಿತ್ರೀಕರಣ

Ragini 2
Published on

ಬೆಂಗಳೂರು: ಸಿನಿಮಾದಲ್ಲಿನ ಐಟಂ ಹಾಡಿಗೆ ‘ತುಪ್ಪದ ಹುಡುಗಿ’ ರಾಗಿಣಿ ದ್ವಿವೇದಿ ಹೆಜ್ಜೆ ಹಾಕಿದ್ದಾರೆ. ಆದರೆ, ಇಲ್ಲಿಯವರೆಗೂ ಒಂದೇ ಒಂದು ಸಿನಿಮಾ ಅಲ್ಲದ ಆಲ್ಬಂ ಹಾಡಿನಲ್ಲಿ ರಾಗಿಣಿ ಕಾಣಿಸಿಕೊಂಡಿಲ್ಲ. ಈಗ ಅದೂ ಸಹ ನೆರವೇರಿದೆ. ಮೊದಲ ಸಲ ಹಿಂದಿ ಮ್ಯೂಸಿಕ್ ಆಲ್ಬಂನಲ್ಲಿ ರಾಗಿಣಿ ಸೊಂಟ ಬಳುಕಿಸಿದ್ದಾರೆ. ಹಾಗಾದರೆ ಏನಿದು ಹಾಡು? ಏನಿದರ ವಿಶೇಷತೆ? ಈ ವಿಚಾರವನ್ನು ಸ್ವತಃ ರಾಗಿಣಿ, ‘ವಿಜಯವಾಣಿ’ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಯುವಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹಿಂದಿ ಮತ್ತು ಪಂಜಾಬಿಯಲ್ಲಿ ಈ ಹಾಡು ಮೂಡಿಬಂದಿದೆ.

ವೀನಸ್ ಎಂಟರ್​ಟೈನ್​ವೆುಂಟ್ ಬ್ಯಾನರ್​ನಲ್ಲಿ ಕೆ.ಪಿ ಶ್ರೀಕಾಂತ್ ನಿರ್ವಿುಸಿದ್ದು, ಮೊದಲ ಸಲ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದೇನೆ. ಈ ಹಾಡಿನ ಜತೆಗೆ ಇದೇ ಸಂಸ್ಥೆ ಜತೆಗೆ ಇನ್ನೂ ಎರಡು ಹಾಡುಗಳ ಒಪ್ಪಂದವಾಗಿದೆ’ ಎನ್ನುತ್ತಾರೆ ರಾಗಿಣಿ. ರ್ಯಾಪ್ ಶೈಲಿಯ ಈ ಹಾಡಿಗೆ ಕ್ವೇಕ್ (ಅರ್ಜುನ್ ಶರ್ಮ) ಸಾಹಿತ್ಯ ಬರೆದು ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲ, ರಾಗಿಣಿ ಜತೆಗೆ ಹೆಜ್ಜೆ ಹಾಕಿದ್ದಾರೆ. ಮುಂಬೈನಲ್ಲಿ ಒಂದು ವಾರ ಕಾಲ ವಿವಿಧ ಲೊಕೇಷನ್​ಗಳಲ್ಲಿ ಈ ಹಾಡಿನ ಶೂಟಿಂಗ್ ನಡೆದಿದೆ. ಈ ಹಿಂದೆ ನಟ, ನೃತ್ಯ ನಿರ್ದೇಶಕ ಪ್ರಭುದೇವ ಅವರ ಜತೆ ಕೆಲಸ ಮಾಡಿದ ವಿಷ್ಣು ದೇವ ಈ ಹಾಡಿಗೆ ನಿರ್ದೇಶನ ಮಾಡಿದ್ದಾರೆ. ‘ನವೆಂಬರ್ ಒಂದರ ರಾಜ್ಯೋತ್ಸವಕ್ಕೂ ಹೊಸ ಪ್ರಾಜೆಕ್ಟ್ ಘೋಷಣೆ ಆಗಲಿದೆ. ಅದರ ಜತೆ ಸದ್ಯ ‘ಕರ್ವ 3’ ಮತ್ತು ‘ಜಾನಿ ವಾಕರ್’ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ’ ಎಂಬುದು ರಾಗಿಣಿ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net