ಕಾಲಿವುಡ್​ಗೆ ಮತ್ತೆ ರಾಗಿಣಿ; ಎಂಟು ವರ್ಷಗಳ ನಂತರ ತಮಿಳು ಚಿತ್ರರಂಗಕ್ಕೆ

Ragini
Published on

ಬೆಂಗಳೂರು: ರಾಗಿಣಿ ದ್ವಿವೇದಿ ಕನ್ನಡದ ಜತೆಗೆ ದಕ್ಷಿಣದ ಎಲ್ಲ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ. ಇತ್ತೀಚೆಗಷ್ಟೇ, ಒಂಭತ್ತು ವರ್ಷಗಳ ಬಳಿಕ ಮಾಲಿವುಡ್ ಪ್ರವೇಶಿಸಿದ್ದ ರಾಗಿಣಿ, ಇದೀಗ ಎಂಟು ವರ್ಷಗಳ ನಂತರ ‘ಒನ್ ಟು ಒನ್’ ಸಿನಿಮಾ ಮೂಲಕ ತಮಿಳಿಗೆ ಹೋಗುತ್ತಿದ್ದಾರೆ. ಕೆ. ತಿರುಜ್ಞಾನಮ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ಸಂಕ್ರಾಂತಿ ದಿನ ಸರಳ ಮುಹೂರ್ತವೂ ನೆರವೇರಿದೆ.

ಈ ಚಿತ್ರದಲ್ಲಿ ಸುಂದರ್ ಸಿ, ವಿಜಯ್ ವರ್ಮಾ, ಜಾರ್ಜ್ ಆಂಟೋನಿ ಪ್ರಮುಖ ಪಾತ್ರದಲ್ಲಿದ್ದರೆ, ರಾಗಿಣಿ ನಾಯಕಿಯಾಗಿ ನಟಿಸಲಿದ್ದಾರೆ. ಈ ಹಿಂದೆ ಅಂದರೆ, 2012ರಲ್ಲಿ ‘ಅರಿಯಾನ್’ ಸಿನಿಮಾದಲ್ಲಿ ನಟಿಸಿದ್ದ ಅವರು ಬಳಿಕ 2014ರಲ್ಲಿ ‘ನಿಮಿರ್ಂದು ನಿಲ್’ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದರು. ಅದಾದ ಬಳಿಕ ತಮಿಳಿನ ಯಾವೊಂದು ಚಿತ್ರದಲ್ಲೂ ರಾಗಿಣಿ ನಟಿಸಿರಲಿಲ್ಲ.

ಈ ಬಗ್ಗೆ ‘ವಿಜಯವಾಣಿ’ಗೆ ಮಾಹಿತಿ ನೀಡಿದ ರಾಗಿಣಿ, ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ. ನನ್ನ ತಮಿಳು ಕಮ್್ಯಾಕ್​ಗೆ ಹೇಳಿಮಾಡಿಸಿದಂತ ಚಿತ್ರವಿದು. ನಟನೆ ತೋರಿಸಲು ಈ ಚಿತ್ರದಲ್ಲಿ ಗಟ್ಟಿ ಪಾತ್ರವೇ ಸಿಕ್ಕಿದೆ. ಸರಿಸುಮಾರು 30 ದಿನಗಳಲ್ಲಿ ಚಿತ್ರದ ಶೂಟಿಂಗ್​ನಲ್ಲಿ ನಾನು ಭಾಗವಹಿಸಲಿದ್ದೇನೆ’ ಎನ್ನುತ್ತಾರೆ. ಇನ್ನೇನು ಕೆಲ ದಿನಗಳಲ್ಲಿ ಚಿತ್ರದ ಶೂಟಿಂಗ್ ಸಹ ಶುರುವಾಗಲಿದ್ದು, ಸಿದ್ಧಾರ್ಥ್ ವಿಪಿನ್ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net