

ಚಿತ್ರ: ರೋಣ
ನಿರ್ದೇಶನ: ಸತೀಶ್ ಕುಮಾರ್
ತಾರಾಗಣ: ರು ರಾಜ ನಂದ, ಪ್ರಕೃತಿ ಪ್ರಸಾದ್, ಶರತ್ ಲೋಹಿತಾಶ್ವ, ಸಂಗೀತಾ, ಬಲರಾಜವಾಡಿ, ಶ್ರೀಧರ್, ಚಿಲ್ಲರ್ ಮಂಜು ಮತ್ತಿತರರು
| ಹರ್ಷವರ್ಧನ್ ಬ್ಯಾಡನೂರು
ರೋಣದ ಸಮಾಜ ಸೇವಕ ರಾಮಕೃಷ್ಣ (ಶರತ್) ರಾಜಕಾರಣಿ ಅಲ್ಲದಿದ್ದರೂ, ಅಲ್ಲಿನ ಶಾಸಕರಿಗಿಂತ ಪವರ್ುಲ್. ಸುತ್ತಮುತ್ತ ಹಳ್ಳಿಗಳಲ್ಲಿ ಏನೇ ಸಮಸ್ಯೆಯಾದರೂ, ಅದಕ್ಕೆ ಪರಿಹಾರ ನೀಡುವ ಮುಖಂಡ. ಅಪ್ಪನ ಹಾದಿಯಲ್ಲೇ ಸಾಗುವ ಮಗ ಶಿವು (ರು). ಊರಿನಲ್ಲಿ ಪ್ರತಿ ವರ್ಷ ಕಾಳಿಕಾಂಬ ಜಾತ್ರೆ ನಡೆಯುತ್ತಿರುತ್ತದೆ. ಆದರೆ, ಈ ಬಾರಿ ಜಾತ್ರೆಯ ಸಮಯದಲ್ಲೇ ರಾಮಕೃಷ್ಣನ ಬಲಗೈ ಬಂಟ ಹನುಮಂತು (ಬಲರಾಜವಾಡಿ) ಸೇರಿ ನಾಲ್ವರ ಹತ್ಯೆ ನಡೆದುಹೋಗುತ್ತದೆ. ಕೊಲೆಗಾರರನ್ನು ಹಿಡಿಯಬೇಕು, ಜಾತ್ರೆಯನ್ನೂ ಭಂಗವಾದಂತೆ ನಡೆಸಬೇಕು ಎಂದು ರಾಮಕೃಷ್ಣ ಮತ್ತು ಶಿವು ಮುಂದಾಗುತ್ತಾರೆ. ಆದರೆ, ಅಲ್ಲಿ ಅವರಿಗೆ ಹಲವು ವ್ನಿಗಳು ಎದುರಾಗುತ್ತವೆ. ಹೊಸ ಹೊಸ ವಿಷಯಗಳು ತೆರೆದುಕೊಳ್ಳುತ್ತವೆ. ಹಾಗಾದರೆ ಕಾಳಿಕಾಂಬ ಜಾತ್ರೆ ನಡೆಯುತ್ತಾ? ಕೊಲೆಗಾರರು ಸಿಗುತ್ತಾರಾ? ಕೊಲೆಗೆ ಕಾರಣವೇನು? ಇಂತಹ ಹಲವು ಪ್ರಶ್ನೆಗಳಿಗೆ "ರೋಣ'ದಲ್ಲಿ ಉತ್ತರವಿದೆ.
"ರೋಣ' ಆ್ಯಕ್ಷನ್ ಡ್ರಾಮಾ ಚಿತ್ರವಾದರೂ ಇದರಲ್ಲಿ ಪ್ರೀತಿ, ಗೆಳೆತನ, ಸಸ್ಪೆನ್ಸ್, ಥ್ರಿಲ್ಲರ್, ಮರ್ಡರ್ ಮಿಸ್ಟರಿ, ಹಾರರ್, ಅಪ್ಪ&ಮಗನ ಸೆಂಟಿಮೆಂಟ್, ದೈವಿಕ ಮತ್ತು ವೈಜ್ಞಾನಿಕ ಅಂಶಗಳಿವೆ. ಚೊಚ್ಚಲ ಚಿತ್ರದಲ್ಲೇ ಸತೀಶ್ ಕುಮಾರ್ ಸವಾಲಿನ ಕಥೆ ಹೆಣೆಯಲು ಯತ್ನಿಸಿದ್ದಾರೆ. ಚಿತ್ರಕಥೆ ಕೆಲವೆಡೆ ಸಡಿಲವಾಗಿರುವಂತೆ ಕಂಡರೂ ಬೋರ್ ಅನ್ನಿಸಿದಂತೆ ನೋಡಿಸಿಕೊಂಡು ಹೋಗುತ್ತದೆ. ರು ರಾಜ ನಂದ ಚೊಚ್ಚಲ ಪ್ರಯತ್ನದಲ್ಲಿ ಗಮನ ಸೆಳೆಯುತ್ತಾರೆ. ಫೈಟ್ಗಳಲ್ಲಿ ಮಿಂಚಿರುವ ಅವರು, ನಟನೆಯಲ್ಲೂ ಭರವಸೆ ಮೂಡಿಸುತ್ತಾರೆ. ಅಪರೂಪ ಎಂಬಂತೆ "ಸಿದ್ಲಿಂಗು' ಶ್ರೀಧರ್ ವಿಭಿನ್ನ ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿಲ್ಲರ್ ಮಂಜು ಆಗಾಗ ನಗಿಸುತ್ತಾರೆ. ಉಳಿದಂತೆ ಪ್ರಕೃತಿ ಪ್ರಸಾದ್, ಶರತ್ ಲೋಹಿತಾಶ್ವ, ಬಲರಾಜವಾಡಿ ಸೇರಿ ಎಲ್ಲ ಪಾತ್ರಗಳೂ ಅಚ್ಚುಕಟ್ಟಾಗಿ ಪಾತ್ರ ನಿಭಾಯಿಸಿದ್ದಾರೆ. ನಾಲ್ಕು ಹಾಡು, ನಾಲ್ಕು ೈಟು ಜತೆಗೆ ಕೆಲ ಮಾಸ್ ಡೈಲಾಗ್ಗಳ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಸಿದ್ಧ ಸೂತ್ರ ಅಳವಡಿಸಿಕೊಂಡೇ ಈ ಚಿತ್ರವೂ ಮೂಡಿಬಂದಿದೆ. ಆದರೆ, ಅದರ ನಡುವೆಯೂ ಕೆಲ ಹೊಸ ಅಂಶಗಳನ್ನು ಸೇರಿಸಿರುವುದು ವಿಶೇಷ. ಗಗನ್ ಬಡೇರಿಯಾ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು, ಹಿನ್ನೆಲೆ ಸಂಗೀತ ಪ್ಲಸ್ ಆಗಿದೆ. ಕನ್ನಡದಲ್ಲಿ ಹೊಸಬರ ಹೊಸ ಪ್ರಯತ್ನಕ್ಕೆ ಬೆನ್ನು ತಟ್ಟಲಿಚ್ಛಿಸುವವರು "ರೋಣ' ಕಣ್ತುಂಬಿಕೊಳ್ಳಬಹುದು.