ಇಂದು ಅನು-ರಘು ಮುಖರ್ಜಿ ಮದುವೆ ವಾರ್ಷಿಕೋತ್ಸವ

Anu Prabhakar - Raghu Mukherjee Final
Published on

ನಾಲ್ಕು ವರ್ಷಗಳ ಹಿಂದೆ ಸರಿಯಾಗಿ ಇದೇ ದಿನದಂದು ಮದುವೆಯಾಗಿದ್ದ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ, ಇಂದು ತಮ್ಮ ನಾಲ್ಕನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಇಬ್ಬರೂ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಕೆಲವು ವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಭೇಟಿಯಾದ ಇಬ್ಬರೂ, ಪರಸ್ಪರ ಹತ್ತಿರವಾದರು. ಮನೆಯವರ ಒತ್ತಾಯದ ಮೇರೆಗೆ, ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ನಂದನಾ ಎಂಬ ಮುದ್ದು ಮಗಳಿದ್ದಾಳೆ.

ಇಂದು ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ಇಬ್ಬರೂ, ಟ್ವಟಿರ್ ಮೂಲಕ ಪರಸ್ಪರ ಶುಭ ಕೋರಿಕೊಂಡಿದ್ದಾರೆ. ‘ಹ್ಯಾಪಿ ಆ್ಯನಿವರ್ಸರಿ ಮೈ ಪ್ರೆಷಿಯಸ್ ...’ ಎಂದು ರಘು ಮುಖರ್ಜಿ ಬೆಳಿಗ್ಗೆ ಶುಭ ಕೋರಿದ್ದರು. ಅದಕ್ಕೆ ಪ್ರತಿಯಾಗಿ, ಅನು ಸಹ ಹ್ಯಾಪಿ ಆ್ಯನಿವರ್ಸರಿ ಎಂದರು. ತಮ್ಮ ಹುಚ್ಚುತನಗಳನ್ನು ಸಹಿಸಿಕೊಳ್ಳುತ್ತಿರುವುದಕ್ಕೆ ಪತಿಗೆ ಥ್ಯಾಂಕ್ಸ್ ಹೇಳಿದ ಅವರು, ಯಾವತ್ತೂ ಪ್ರೀತಿಸುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net