More

    ‘ಇದೊಂದು ವಿಚಾರವನ್ನು ಪುರುಷರೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ, ಗುಟ್ಟಾಗಿಡಿ’; ಮಹಿಳೆಯರಿಗೆ ಹರಿಪ್ರಿಯಾ ನೀಡಿದ್ದಾರೆ ಒಂದು ಸಲಹೆ..!

    ಬೆಂಗಳೂರು: ನಟಿ ಹರಿಪ್ರಿಯಾ ಮಹಿಳೆಯರಿಗೆ ಒಂದು ಗುಟ್ಟು ಹೇಳಿದ್ದಾರೆ. ಸರಿಯಾಗಿ ಕೇಳಿಸಿಕೊಳ್ಳಿ…
    ಇದೊಂದು ವಿಚಾರವನ್ನು ಯಾವ ಮಹಿಳೆಯರೂ ಪುರುಷನೊಂದಿಗೆ ಹಂಚಿಕೊಳ್ಳಬಾರದೆಂದು ಹರಿಪ್ರಿಯಾ ಹೇಳಿದ್ದಾರೆ. ಹಾಗಿದ್ದರೆ ಏನದು?

    ಹೀಗೆ ಬರೆದಿದ್ದಾರೆ ಹರಿಪ್ರಿಯಾ…

    ಜಗತ್ತಿನಲ್ಲಿ ಏನನ್ನು ಬೇಕಾದರೂ ಎದುರಿಸಬಲ್ಲ ತಾಕತ್ತಿರುವ ಅನೇಕ ಮಹಿಳೆಯರು ಒಂದು ಜಿರಳೆ ಎಂಬ ಜೀವಿಯ ವಿರುದ್ಧ ಸದಾ ಅಸಹ್ಯ ಹುಟ್ಟಿಸಿಕೊಳ್ಳುತ್ತಾರೆ. ಹತ್ತಿರ ಬಂದರೆ ಸಾಕು ದೂರ ದೂರ ಹೋಗುತ್ತಾರೆ. ನಾನೂ ಅಷ್ಟೇ ಆ ಜಿರಳೆಯನ್ನು ಸಹಿಸಿಕೊಳ್ಳಬೇಕು ಎಂಬ ಆಲೋಚನೆಯನ್ನೇ ದ್ವೇಷಿಸುತ್ತೇನೆ.

    ನೋಡಲು ಚಿಕ್ಕದಾಗಿರುವ ಜಿರಳೆಗಳು ಮಾನಸಿಕ ಮತ್ತು ದೈಹಿಕವಾಗಿ ಎಷ್ಟೇ ಸದೃಢರಾಗಿರುವ ಮಹಿಳೆಯರನ್ನೂ ಹೆದರಿಸಿಬಿಡಬಲ್ಲವು. ನಾವು ಮಹಿಳೆಯರು ಎಂಥ ಪ್ರಾಣಿಗಳನ್ನಾದರೂ ಪಳಗಿಸಿಬಿಡಬಲ್ಲೆವು. ಅವು ಎಷ್ಟೇ ದೊಡ್ಡದಾಗಿರಲಿ, ಡೈನೋಸರ್​ರೇ ಆಗಿರಲಿ….ಆದರೆ ಜಿರಳೆಗಳನ್ನು ಮಾತ್ರ ಪಳಗಿಸಲು ನಮ್ಮಿಂದಾಗದು.

    ಈ ಜಿರಳೆಗಳು ಯಾಕೆ ಇರಬೇಕು? ನನಗೆ ಜಿರಳೆ ಬಗ್ಗೆ ಯಾಕಿಷ್ಟು ಭಯ, ಹೇಸಿಗೆ ಎಂದು ವಿವರಿಸಲು ಸಾಧ್ಯವಾಗುತ್ತಿಲ್ಲ. ಕಾರಣವೂ ಗೊತ್ತಿಲ್ಲ. ಬಹುಶಃ ಅವು ಕಾಣಿಸಿಕೊಳ್ಳುವ, ಎಲ್ಲೆಂದರಲ್ಲಿ ಒಮ್ಮೆಲೇ ಬಂದುಬಿಡುವ ರೀತಿಯೇ ನನ್ನ ದ್ವೇಷಕ್ಕೆ ಕಾರಣ ಇರಬಹುದು. ಇದಕ್ಕೆ ಕತ್ಸರಿಡಾಫೋಬಿಯಾ ಎಂದು ಹೆಸರು ನೀಡಲಾಗಿದೆ.
    ಮತ್ತೊಂದು ಏನೆಂದರೆ, ಈ ಜಿರಳೆಗಳ ಬಗೆಗಿನ ಭಯ ವಂಶಪಾರಂಪರ್ಯವಾಗಿ ಬರುತ್ತದೆ ಎಂದು ನನಗೆ ಬಲವಾಗಿ ಅನ್ನಿಸುತ್ತದೆ.

    ನನ್ನ ಅಮ್ಮ, ಆಂಟಿಯರೂ ಕೂಡ ಜಿರಳೆ ಕಂಡ ತಕ್ಷಣ ಓಡುತ್ತಿದ್ದರು. ಅವರಿಂದಲೇ ನನಗೆ ಪಾಸ್​ ಆಗಿದೆ. ಹಾಗಾಗಿ ಈ ಭಯ, ದ್ವೇಷಕ್ಕೆ ಅವರನ್ನೇ ಹೊಣೆ ಮಾಡುತ್ತೇನೆ.

    ಈ ವಿಚಾರವಾಗಿ ಎಲ್ಲ ಮಹಿಳೆಯರಿಗೂ ಒಂದು ಸಲಹೆ ನೀಡುತ್ತೇನೆ. ಯಾವ ಕಾರಣಕ್ಕೂ ಯಾವಾಗಲೂ ನಿಮಗೆ ಜಿರಳೆ ಎಂದರೆ ಭಯ ಎಂಬ ವಿಚಾರವನ್ನು ಯಾವ ಪುರುಷರ ಬಳಿಯೂ ಹೇಳಿಕೊಳ್ಳಬೇಡಿ. ಹಾಗೆ ಹೇಳಿಕೊಳ್ಳುವುದರಿಂದ ಅವರು ಜಿರಳೆಯನ್ನು ಒಂದು ಯುದ್ಧತಂತ್ರವನ್ನಾಗಿ ಬಳಸಿ ನಿಮ್ಮನ್ನು ನಿಯಂತ್ರಿಸುವ ಎಲ್ಲ ಸಾಧ್ಯತೆಗಳೂ ಇರುತ್ತವೆ.

    ನನಗೆ ಜಿರಳೆ ಎಂದರೆ ಭಯ ಎಂಬ ವಿಷಯ ತಿಳಿದ ನನ್ನ ಸೋದರನ ಸ್ನೇಹಿತರು ಅದೆಷ್ಟೋ ಬಾರಿ ಜಿರಳೆಯನ್ನು ಹಿಡಿದುಕೊಂಡು ಬಂದು ನನ್ನ ಮುಖದ ಎದುರು ಹಿಡಿದು ಹೆದರಿಸಿದ್ದಾರೆ. ಹೇಸಿಗೆ ಹುಟ್ಟಿಸಿದ್ದಾರೆ. ಜಿರಳೆಯ ಕಾಲುಗಳನ್ನು ಹಿಡಿದು ನನ್ನ ಕಣ್ಣೆದುರು ತಂದರೆ ನನ್ನ ಬೆನ್ನು ಮೂಳೆಯಲ್ಲಿ ನಡುಕ ಬರುತ್ತಿತ್ತು. ಪ್ರತಿಸಲವೂ ಆವ್​​….ಎಂದು ಕೂಗಿಕೊಳ್ಳುತ್ತಿದ್ದೆ.

    ಜಿರಳೆ ನನ್ನ ಕಡೆಗೆ ಒಂದು ಹೆಜ್ಜೆ ಇಟ್ಟರೆ, ನಾನು 1000 ಹೆಜ್ಜೆ ಹಿಂದಕ್ಕೆ ಇಡುತ್ತೇನೆ. ನನ್ನ ಕೋಣೆಗೆ ಏನಾದರೂ ಜಿರಳೆ ಬಂದರೆ ಒಂದೋ ಅದು ಸಾಯಬೇಕು..ಇಲ್ಲವೇ ಹೋಗಬೇಕು..ಅಷ್ಟು ಮಾಡುತ್ತೇನೆ.

    ಜಿರಳೆಗಳ ಭಯವನ್ನು ನಾನೀಗ ನಿವಾರಿಸಿಕೊಂಡಿದ್ದೇನೆ…ಈಗ ನಿಮ್ಮ ಸರದಿ ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ. ಹಾಗೇ ಜಿರಳೆಗಳೊಂದಿಗೆ ನಡೆಸಿದ ಡೇಟಿಂಗ್​ನ್ನು ಪುರುಷರಿಗೆ ತಿಳಿಸಬೇಡಿ ಎಂದು ಫನ್ನಿಯಾಗಿ ಟ್ವಿಟರ್​ನಲ್ಲಿ ಸಲಹೆ ನೀಡಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts