ಹಳ್ಳಿ ಹುಡುಗರ ಜತೆ ರಾಘವೇಂದ್ರ ರಾಜ್​ಕುಮಾರ್​

Rajanna
Published on

ಬೆಂಗಳೂರು: ನಟ ರಾಘವೇಂದ್ರ ರಾಜಕುಮಾರ್ ‘ರಾಜತಂತ್ರ’ ಮೂಲಕ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಇನ್ನೇನು ಇದೇ 19ಕ್ಕೆ ಅವರು ನಟಿಸಿರುವ ‘ಪೊಗರು’ ಚಿತ್ರವೂ ಬಿಡುಗಡೆ ಆಗಲಿದೆ. ಇದೀಗ ಆ ಗ್ಯಾಪ್​ನಲ್ಲಿಯೇ ‘ಖಡಕ್ ಹಳ್ಳಿ ಹುಡುಗರು’ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ರಾಘಣ್ಣ ನಟಿಸುತ್ತಿದ್ದಾರೆ. ಅಂದಹಾಗೆ, ಎಂ.ಯು ಪ್ರಸನ್ನಹಳ್ಳಿ ನಿರ್ದೇಶನದ ಈ ಚಿತ್ರಕ್ಕೆ ಪುನೀತ್ ಪಟೇಲ್ ಬಂಡವಾಳ ಹೂಡುತ್ತಿದ್ದು, ಅಭಿಲಾಷ್ ಮುಖ್ಯ ಪಾತ್ರದಲ್ಲಿದ್ದಾರೆ.

‘ಕೆಜಿಎಫ್’, ‘ಲವ್ ಮಾಕ್​ಟೇಲ್’ ಮತ್ತು ‘ಬಡವ ರಾಸ್ಕಲ್’ ಚಿತ್ರದಲ್ಲಿ ನಟಿಸಿರುವ ಅಭಿಲಾಷ್, ‘ಖಡಕ್ ಹಳ್ಳಿ ಹುಡುಗರು’ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದಾರೆ. ಎಂಟು ಹುಡುಗರ ಪುಂಡಾಟ ಮತ್ತು ಮೋಜು ಮಸ್ತಿಯನ್ನು ಹಾಸ್ಯ ಮತ್ತು ಸಸ್ಪೆನ್ಸ್ ಶೈಲಿಯಲ್ಲಿ ಈ ಚಿತ್ರದಲ್ಲಿ ನಿರ್ದೇಶಕರು ತೋರಿಸಲಿದ್ದಾರಂತೆ. ಪ್ರಭಾಸ್ ರಾಜ್, ರಾಜೀವ್ ರಾಥೋಡ್, ದೀಪು ವಿಜಯ್, ವರದರಾಜ್, ರಮೇಶ್ ಕೃಷ್ಣ, ಉದಯ್ ಕಾಗಲ್, ಮಹಾಂತೇಶ್, ರಾಘವೇಂದ್ರ, ಮೀನಾ, ಯುಕ್ತ ಮಲ್ನಾಡ್, ದೀಪಾ ಸೇರಿ ಹಲವರು ಪಾತ್ರವರ್ಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net