

ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಒಂದಿಷ್ಟು ಫೋಟೋಗಳನ್ನು ತಮ್ಮ ಅಭಿಮಾನಿಗಳ ಜತೆಗೆ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರು, ತಮ್ಮ ‘ಫೇವರೇಟ್ ಬಾಯ್ಸ’ನ ಒಂದು ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸರ್ಕಾರದ ಮುಂದೆ ಚಿತ್ರರಂಗದ ಸಮಸ್ಯೆ ಪಟ್ಟಿ
ಅಂದಹಾಗೆ, ಯಶ್ ಮತ್ತು ರಾಧಿಕಾ ಪಂಡಿತ್ ಮಗನಿಗೆ ಆರು ತಿಂಗಳು ತುಂಬಿದ್ದು, ಇತ್ತೀಚೆಗೆ ಮಗನ ಚಿತ್ರವನ್ನು ಸೋಷಿಯಲ್ ಮೀಡಿಯಾ ಮೂಲಕವೇ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ಹಂಚಿಕೊಂಡಿದ್ದರು. ಇದೀಗ ರಾಧಿಕಾ ಪಂಡಿತ್, ತಮ್ಮ ಪತಿ ಮತ್ತು ಮಗನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಭಯದಲ್ಲೇ ಬಣ್ಣದ ಬದುಕು
ಯಶ್ ಮತ್ತು ರಾಧಿಕಾ ದಂಪತಿಯ ಮಗಳಿಗೆ ಐರಾ ಎಂದು ನಾಮಕರಣ ಮಾಡಲಾಗಿತ್ತು. ಬಹುಶಃ ಲಾಕ್ಡೌನ್ ಇಲ್ಲದಿದ್ದರೆ, ಮಗನ ನಾಮಕರಣ ಸಹ ಮುಗಿದಿರುತಿತ್ತೇನೋ? ಆದರೆ, ಲಾಕ್ಡೌನ್ನಿಂದಾಗಿ ಸದ್ಯಕ್ಕೆ ನಾಮಕರಣ ಮಾಡಲಾಗಿತ್ತು. ಇನ್ನು ಮಗನಿಗೆ ಯಶ್ ಮತ್ತು ರಾಧಿಕಾ ಪಂಡಿತ್ ಯಾವ ಹೆಸರಿಡುತ್ತಾರೆ ಎಂಬ ಕುತೂಹಲ, ಇಬ್ಬರ ಅಭಿಮಾನಿಗಳಲ್ಲೂ ಮನೆಮಾಡಿದೆ.