VIDEO| ಹಾಡುಗಾರ್ತಿಯಾದ ಯಶ್​- ರಾಧಿಕಾ ಪುತ್ರಿ ಐರಾ

f4a25bd74ff40e65dcd037dcf8ffe132
Published on

ಯಶ್​ ಮತ್ತು ರಾಧಿಕಾ ಪಂಡಿತ್​ ಪುತ್ರಿ ಐರಾ, ವಿಡಿಯೋ ಮೂಲಕವೇ ಗಮನಸೆಳೆಯುತ್ತಿದ್ದಾಳೆ. ತೊದಲು ನುಡಿಯಲ್ಲಿಯೇ ಮಾತನಾಡುತ್ತ ನಾಡಿನ ಜನರ ಅಚ್ಚುಮೆಚ್ಚಾಗಿದ್ದಾಳೆ. ಆ ಪುಟಾಣಿಯ ಬಗೆಬಗೆ ವಿಡಿಯೋ ತುಣುಕುಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುವ ರಾಧಿಕಾ, ಆ ವಿಡಿಯೋ ಹಾಕುವುದರ ಹಿನ್ನೆಲೆಯನ್ನೂ ಹೇಳಿಕೊಂಡಿರುತ್ತಾರೆ. ಇತ್ತೀಚೆಗಷ್ಟೇ ತಮ್ಮ ಯಥರ್ವನಿಗೆ ಫೋಟೋದಲ್ಲಿನ ಅಪ್ಪ, ಅಮ್ಮನ ಗುರುತು ಹೇಳಿಕೊಟ್ಟ ವಿಡಿಯೋ ಹಂಚಿಕೊಂಡಿದ್ದರು. ಇದೀಗ ಪಂಡಿತ್​ ಭೀಮಸೇನ್​ ಜೋಷಿ ಅವರ ಕಂಠದಿಂದ ಬಂದ ಹಾಡನ್ನು ಐರಾ ಅನುಕರಣೆ ಮಾಡಿದ್ದಾಳೆ. ‘ಸದಾ ಎನ್ನ ಹೃದಯದಲಿ ವಾಸ ಮಾಡೋ ಶ್ರೀ ಹರಿ.. ಎಂಬ ಹಾಡನ್ನು ಐರಾ ಹಾಡಿದ್ದಾಳೆ. ಆ ಹಾಡಿನ ತುಣುಕು ಇಲ್ಲಿದೆ ನೋಡಿ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net