ರಾಧಿಕಾ ಪಂಡಿತ್ ಕೈರುಚಿಯ ಈ ತಿಂಡಿಯನ್ನು ಯಶ್ ಬಾಯಿ ಚಪ್ಪರಿಸಿಕೊಂಡು ತಿಂತಾರಂತೆ!

Radhika
Published on

ಬೆಂಗಳೂರು: ಯಶ್‌ಗೆ ನಾನು ತಯಾರಿಸುವ ಮೆಣಸಿನಕಾಯಿ ಬಜ್ಜಿ ಮತ್ತು ಪೂರಿ ಸಖತ್ ಇಷ್ಟ ಪಡುತ್ತಾರೆ. ಅವರು ಕೇಳಿದಾಗ ತಿಂಡಿಗಳನ್ನು ಮಾಡಿಕೊಡುತ್ತೇನೆ ಎಂದು ನಟಿ ರಾಧಿಕಾ ಪಂಡಿತ್ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಫ್ರೀಡಂ ರಿಫೈನ್ಡ್ ಸನ್ ಫ್ಲವರ್ ಆಯಿಲ್‌ನ 10 ಲೀ. ಬಹು ಬಳಕೆಯ ಜಾರ್ ಅನ್ನು ಉತ್ಪನ್ನದ ರಾಯಭಾರಿಯೂ ಆಗಿರುವ ನಟಿ ರಾಧಿಕಾ ಪಂಡಿತ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.

ಮನೆಯಲ್ಲಿ ಅಮ್ಮ ತಯಾರಿಸುವ ತಿಂಡಿಗಳನ್ನು ಮಾಡುತ್ತಿರುತ್ತೇನೆ. ಬಜ್ಜಿ, ಬೋಂಡಾ, ಚಕ್ಕುಲಿ, ನಿಪ್ಪಟ್ಟು ಹಲವು ಕುರುಕಲು ತಿಂಡಿಗಳನ್ನು ಮಾಡುತ್ತೇನೆ. ಯಶ್ ಕೂಡ ನಾನು ತಯಾರಿಸುವ ಮೆಣಸಿನಕಾಯಿ ಬಜ್ಜಿ ಮತ್ತು ಪೂರಿಯನ್ನು ಸಖತ್ ಇಷ್ಟಪಡುತ್ತಾರೆ. ಇದರ ಜತೆಗೆ ನನಗೆ ಇಷ್ಟವಾಗುವ ಈರುಳ್ಳಿ ಬಜ್ಜಿಯನ್ನು ಕೂಡ ಮಾಡುತ್ತೇನೆ ಎಂದು ಹೇಳಿದರು.

ಫ್ರೀಡಂ ರಿಫೈನ್ಡ್ರ ಸನ್‌ಲ್ವರ್ ಆಯಿಲ್ ಭಾರತದಲ್ಲಿ ಸೂರ್ಯಕಾಂತಿ ಎಣ್ಣೆ ವಿಭಾಗದಲ್ಲಿ ನಂ.1 ಮಾರಾಟದ ಉತ್ಪನ್ನವಾಗಿದೆ. ಕರ್ನಾಟಕದಲ್ಲಿ ಸೂರ್ಯಕಾಂತಿ ಎಣ್ಣೆಯ ಮಾರುಕಟ್ಟೆ ಗಾತ್ರ 32 ಸಾವಿರ ಟನ್‌ಗಳಿಗಿಂತ ಹೆಚ್ಚಿದೆ. ನಮ್ಮ ಉತ್ಪನ್ನವನ್ನು ತ್ವರಿತವಾಗಿ ಸ್ವೀಕರಿಸುತ್ತಿರುವುದರಿಂದ ಕರ್ನಾಟಕವು ಕೇಂದ್ರೀಕೃತ ರಾಜ್ಯವಾಗಿದೆ. - ಪಿ. ಚಂದ್ರಶೇಖರ ರೆಡ್ಡಿ, ಜೆಮಿನಿ ಎಡಿಬಲ್ಸ್ ಮತ್ತು ಫ್ಯಾಬ್ಸ್ ಇಂಡಿಯಾ ಲಿ. ಹಿರಿಯ ಉಪಾಧ್ಯಕ್ಷ (ಸೇಲ್ಸ್ ಮತ್ತು ಮಾರ್ಕೆಟಿಂಗ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net