ಡಾನ್ಸ್ ಚಿತ್ರದಲ್ಲಿ ರಚಿತಾ ರಾಮ್; ಮಯೂರ ನಿರ್ದೇಶನದಲ್ಲಿ ಅಭಿನಯ

Rachitha
Published on

ಬೆಂಗಳೂರು: ‘ಕನ್ನಡ್ ಗೊತ್ತಿಲ್ಲ’ ಸಿನಿಮಾ ಖ್ಯಾತಿಯ ಮಯೂರ ರಾಘವೇಂದ್ರ ನಿರ್ದೇಶನದ ‘ಪಂಕಜ ಕಸ್ತೂರಿ’ ಎಂಬ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಾರೆ ಎಂಬ ಸುದ್ದಿಯಾಗಿತ್ತು. ಇದೀಗ ಈ ತಂಡದಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಂದಿದೆ. ಅದೇನೆಂದರೆ, ‘ಪಂಕಜ ಕಸ್ತೂರಿ’ ಚಿತ್ರವನ್ನು ಸದ್ಯ ಪಕ್ಕಕ್ಕಿಡಲಾಗಿದ್ದು, ಅದರ ಬದಲು ಇನ್ನೊಂದು ಚಿತ್ರದಲ್ಲಿ ರಚಿತಾ ಅವರನ್ನು ನಿರ್ದೇಶಿಸಲಿದ್ದಾರೆ ಮಯೂರ್. ಹಾಗಾದರೆ, ‘ಪಂಕಜ ಕಸ್ತೂರಿ’ ಸಿನಿಮಾ ಏನಾಯಿತು? ಅದಕ್ಕುತ್ತರ ನಟಿ ರಚಿತಾ ರಾಮ್ ‘ವಿಜಯವಾಣಿ’ಗೆ ನೀಡಿದ್ದಾರೆ.

‘ನಾನು ಮತ್ತು ಮಯೂರ ಕಾಂಬಿನೇಷನ್​ನಲ್ಲಿ ‘ಪಂಕಜ ಕಸ್ತೂರಿ’ ಸಿನಿಮಾ ಶುರುವಾಗಬೇಕಿತ್ತು. ಒಂದಷ್ಟು ಕಾರಣಕ್ಕೆ ಆ ಚಿತ್ರವನ್ನು ಮುಂದೂಡಿದ್ದೇವೆಯೇ ಹೊರತು ಸಿನಿಮಾ ನಿಂತಿಲ್ಲ. ಅದರ ಬದಲಿಗೆ ಮಯೂರ ಹೊಸದಾದ ಕಥೆ ಸಿದ್ಧಪಡಿಸಿದ್ದಾರೆ. ಆ ಚಿತ್ರದಲ್ಲಿ ನೃತ್ಯವೇ ಪ್ರಧಾನ. ಮೊದಲ ಸಲ ಡಾನ್ಸ್​ಗೆ ಸಂಬಂಧಿಸಿದ ಸಿನಿಮಾದಲ್ಲಿ ನಟಿಸಲಿದ್ದೇನೆ. ಸದ್ಯಕ್ಕೆ ಕೈಯಲ್ಲಿರುವ ಸಿನಿಮಾ ಮುಗಿಸಿದ ಬಳಿಕ ಆ ಚಿತ್ರದ ಕೆಲಸಗಳು ಶುರುವಾಗಲಿವೆ’ ಎಂಬುದು ರಚಿತಾ ಮಾತು.

ಇತ್ತೀಚಿನ ದಿನಗಳಲ್ಲಿ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಮಿಂಚುತ್ತಿರುವ ರಚಿತಾ, ಇದೀಗ ಹೊಸ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ‘ನನಗೆ ಡಾನ್ಸ್ ಅಂದರೆ ಇಷ್ಟ. ಅದರಲ್ಲೂ ಭರತನಾಟ್ಯ ತುಂಬ ಖುಷಿಯ ಕೊಡುವ ನೃತ್ಯ ಪ್ರಕಾರ. ಇದೀಗ ನೃತ್ಯದ ಹಿನ್ನೆಲೆಯುಳ್ಳ ಕಥೆ ಮಾಡಿದ್ದಾರೆ. ತುಂಬ ಎಗೈ ್ಸ್ ಆಗಿದ್ದೇನೆ’ ಎನ್ನುತ್ತಾರೆ ರಚಿತಾ. ಹಾಗಾದರೆ, ಈ ಚಿತ್ರದ ನಿರ್ವಪಕರು ಯಾರು? ತಾಂತ್ರಿಕ ಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದನ್ನು ಶೀಘ್ರದಲ್ಲಿ ಬಹಿ ರಂಗಪಡಿಸಲಿದೆಯಂತೆ ತಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net