ಹುಟ್ಟು ಹಬ್ಬದಂದೇ ತನ್ನ ಮದುವೆ ಬಗ್ಗೆ ಬಿಗ್ ಅಪ್ಡೇಟ್​ ಕೊಟ್ಟ ರಚಿತಾ ರಾಮ್! | Marriage

Untitled design - 2025-10-03T140916.384
Published on

Marriage: ಕನ್ನಡದ ಬ್ಯೂಟಿ ರಚಿತಾ ರಾಮ್​ಗೆ ಹೋದಲ್ಲಿ, ಬಂದಲ್ಲಿ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳು ಸೇರಿದಂತೆ ಇತರರಿಗೆ ಅವರ ಹುಟ್ಟು ಹಬ್ಬದಂದೇ ಇದೇ ಮೊದಲ ಬಾರಿಗೆ ತಮ್ಮ ಮದುವೆ ಬಗ್ಗೆ ಬಿಗ್​ ಅಪ್ಡೇಟ್​ವೊಂದನ್ನು ನೀಡಿದ್ದಾರೆ.

ಅ್ಯಂಕರ್​ ಅನುಶ್ರೀ ಬಳಿಕ ಚಂದನವದಲ್ಲಿ ಇದೀಗ ರಚಿತಾ ರಾಮ್​ ಹಸೆಮಣೆ ಏರುವ ನಿರೀಕ್ಷೆಯಲ್ಲಿದ್ದಾರೆ. ಹೌದು, ಇಂದು ಅವರು 33ನೇ ವರ್ಷಕ್ಕೆ ಕಾಲಿಟ್ಟಿದ್ದು, ಇದೇ ಮೊದಲ ಬಾರಿಗೆ ಅಭಿಮಾನಿಗಳ ಜೊತೆಗೂಡಿ ಹಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಮಾಧ್ಯಮಾದವರ ಜತೆ ಮಾತನಾಡಿದ ರಚ್ಚು ಮದುವೆ ಬಗ್ಗೆ ರೀವಿಲ್​​ ಮಾಡಿದ್ದಾರೆ.

ಆದಷ್ಟು ಬೇಗ ಮದುವೆ ಆಗೇ ಆಗ್ತೇನೆ

ವಿವಾಹ ಆಗಬೇಕು ಅಂತ ನಿರ್ಧರಿಸಿದ್ದೇನೆ. ಆದಷ್ಟು ಬೇಗ ಮದುವೆ ಆಗುತ್ತೇನೆ. ನನ್ನ ಮದುವೆ ಆಗೋ ಹುಡುಗನ ಬಗ್ಗೆ ನನಗೆ ಯಾವುದೇ ಕನಸಿಲ್ಲ. ಮನೆಯಲ್ಲಿ ಹುಡುಗನ ಹುಡುಕುತ್ತಾ ಇದ್ದಾರೆ. ನಾನು ಅರೇಂಜ್ ಮ್ಯಾರೇಜ್ ಆಗ್ತೀನಿ ಎಂದು ರಚ್ಚು ಹೇಳಿದ್ದಾರೆ.

'ಕೂಲಿ'ಯಿಂದ ಕ್ರೇಜ್

ಇದೇ ಮೊದಲ ಬಾರಿಗೆ ಖ್ಯಾತ ನಟ ರಜನಿಕಾಂತ್​ ಜೊತೆ ಕೂಲಿ ಸಿನಿಮಾದಲ್ಲಿ ರಚಿತಾ ರಾಮ್​ ಅಭಿನಯ ಮಾಡಿದ್ದು, ಕೂಲಿ ಸೂಪರ್​ ಹಿಟ್​ ಬಳಿಕ ಇದೀಗ ರಚ್ಚು​ ಕ್ರೇಜ್​ ದುಪ್ಪಟ್ಟಾಗಿದೆ. ಹಾಗಾಗಿ, ಇನ್ಮುಂದೆ ನಾನು ಕಂಟೆಂಟ್ ಸಿನಿಮಾಗಳನ್ನು ಮಾಡಲು ನಿರ್ಧಾರ ಮಾಡಿದ್ದೇನೆ ಎಂದು ರಚಿತಾ ರಾಮ್ ತಿಳಿಸಿದ್ದಾರೆ. ಅಲ್ಲದೆ, ಕೂಲಿ ಬಳಿಕ ಇದೀಗ ಲೋಕೇಶ್ ಕನಗರಾಜ್ ಹೀರೋ ಆಗಿ ನಟಿಸುತ್ತಿರುವ ತಮಿಳು ಸಿನಿಮಾಗೆ ರಚಿತಾ ನಾಯುಕಿ ಎಂಬ ಮಾತುಗಳು ಸಿನಿ ವಲಯದಲ್ಲಿ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net