ಕೃಷ್ಣನಿಗೆ ರಾಧೆ ಸಿಕ್ಕಾಯ್ತು!

Radhe
Published on

ಬೆಂಗಳೂರು: ‘ಲವ್ ಮಾಕ್​ಟೇಲ್’ ನೋಡಿದವರಿಗೆ, ಅದರ ಮುಂದಿನ ಭಾಗದಲ್ಲಿ ಏನೆಲ್ಲ ಆಗಬಹುದು, ಕಥೆ ಹೇಗೆ ಮುಂದುವರಿಯಬಹುದು, ಯಾರೆಲ್ಲ ಹೊಸದಾಗಿ ಸೇರಿಕೊಳ್ಳಬಹುದು ಎಂಬ ಕುತೂಹಲ ಸಹಜವಾಗಿ ಇದ್ದೇ ಇರುತ್ತದೆ. ಆದರೆ, ಕೃಷ್ಣ ಮಾತ್ರ ಇದುವರೆಗೂ ಚಿತ್ರದ ಬಗ್ಗೆ ಯಾವೊಂದು ಮಾಹಿತಿಯನ್ನೂ ಬಿಟ್ಟುಕೊಟ್ಟಿರಲಿಲ್ಲ. ಈಗ ಅವರು ಗುರುವಾರ, ಚಿತ್ರಕ್ಕೆ ನಾಯಕಿಯನ್ನು ಫಿಕ್ಸ್ ಮಾಡಿದ್ದಾರೆ. ಈ ಬಾರಿ ಅವರ ಜತೆಗೆ ತೆರೆ ಹಂಚಿಕೊಳ್ಳುತ್ತಿರುವವರ ಹೆಸರು ರಚೆಲ್ ಡೇವಿಡ್.

ಈ ರಚೆಲ್ ಮೂಲತಃ ಕೇರಳದವರಾದರೂ ಹುಟ್ಟಿದ್ದು, ಬೆಳೆದಿದ್ದು ಮೈಸೂರಿನಲ್ಲಿ. ಓದಿದ್ದು ಬೆಂಗಳೂರಿನಲ್ಲಿ. ಆ ನಂತರ ಮಾಡೆಲಿಂಗ್​ನಲ್ಲಿ ತೊಡಗಿಸಿಕೊಂಡಿದ್ದ ರಚೆಲ್ ಅವರಿಗೆ ಮಲಯಾಳಂನ ‘ಇರುಪತಿಯೊನ್ನಾಮ್ ನೂಟ್ರಾಂಡು’ ಎಂಬ ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತಂತೆ. ಅದರ ನಂತರ ‘ಒರೊನ್ನಾನರ ಪ್ರಣಯಕದಾ’ ಮತ್ತು ‘ಕಬೇರಿಂದೆ ದಿವಸಂಗಳ್’ ಚಿತ್ರಗಳಿಗೆ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಹೀಗೆ ಮೂರು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದ ರಚೆಲ್, ಈಗ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net