ನಿರ್ದೇಶಕನಾಗುವುದೇ ನನ್ನ ಕನಸೆಂದ ಅಭಿಮಾನಿಗೆ ಜಗ್ಗೇಶ್​ ಎಚ್ಚರಿಕೆ ಸಂದೇಶ ಹೀಗಿದೆ...

jaggeshdub
Published on

ಬೆಂಗಳೂರು: ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಆಸೆ ಹೊತ್ತು ಬರುವವರಿಗೆ ನವರಸ ನಾಯಕ ಜಗ್ಗೇಶ್​ ಅವರು ಎಚ್ಚರಿಕೆ ಸಂದೇಶವೊಂದನ್ನು ನೀಡಿದ್ದಾರೆ.

ಜಗ್ಗೇಶ್​ ಸರ್​, ನಿರ್ದೇಶಕನಾಗಬೇಕೆಂಬುದು ನನ್ನ ಕನಸು. ನಾನೀಗ ದ್ವಿತೀಯ ವರ್ಷದ ಡಿಪ್ಲೋಮ ಮಾಡುತ್ತಿದ್ದೇನೆ. ಮುಗಿದ ಬಳಿಕ ಇಂಜಿನಿಯರ್​ ಸೇರಿಕೊಳ್ಳಲಾ? ಅಥವಾ ಸಿನಿಮಾಗೆ ಬರಲಾ? ಎಂದು ಅಭಿಮಾನಿಯೊಬ್ಬ ಟ್ವೀಟ್​ ಮೂಲಕ ಜಗ್ಗೇಶ್​ ಅವರನ್ನು ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್​, ದಯಮಾಡಿ ಓದಿ ದಡ ಸೇರಿ. ಇಂದಿನ ಸಿನಿಮಾ ನಂಬಿ ತಂದೆ-ತಾಯಿ ಕನಸು, ನಿಮ್ಮ ಜೀವನ ಹಾಳು ಮಾಡಿಕೊಳ್ಳದಿರಿ. ನೀವೆಲ್ಲ ಅಂದುಕೊಂಡಷ್ಟು ಸುಲಭವಿಲ್ಲ ಇಂದಿನ ಸಿನಿಮಾ. ಬೇಕಾದರೆ ಸಂತೋಷಕ್ಕೆ ಹವ್ಯಾಸವನ್ನಾಗಿ ಬಳಸಿ ಆದರೆ, ವೃತ್ತಿಯಾಗಿ ಅಲ್ಲ. ಕೆಲವೇ ಕಲವರನ್ನು ಬಿಟ್ಟು ಶೇ. 98% ಸಿನಿಮಾ ಮಂದಿ ಸಂಕಷ್ಟದಲ್ಲಿದ್ದಾರೆಂದು ಅಭಿಮಾನಿಗೆ ಜಗ್ಗೇಶ್​ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net