ವಾಮನನ ಜತೆ ರಚನಾ; ಧನ್ವೀರ್ ಎದುರು ತುಳುನಾಡ ಬೆಡಗಿ

Vamana
Published on

ಬೆಂಗಳೂರು: ಧನ್ವೀರ್ ಅಭಿನಯದ ‘ವಾಮನ’ ಚಿತ್ರದ ಚಿತ್ರೀಕರಣ ಶುರುವಾಗಿ ಹಲವು ದಿನಗಳಾಗಿದ್ದರೂ, ನಾಯಕಿಯ ಸುದ್ದಿಯೇ ಇರಲಿಲ್ಲ. ಅದೇನು ನಾಯಕಿಯ ಆಯ್ಕೆಯೇ ಆಗಿರಲಿಲ್ಲವೋ ಅಥವಾ ಆಗಿದ್ದರೂ ಚಿತ್ರತಂಡ ಬಹಿರಂಗಪಡಿಸಿರಲಿಲ್ಲವೋ ಗೊತ್ತಿಲ್ಲ. ಈಗ ಕೊನೆಗೂ ನಾಯಕಿಯ ಘೋಷಣೆಯಾಗಿದ್ದು, ಧನ್ವೀರ್ ಎದುರಿಗೆ ಕರಾವಳಿಯ ರಚನಾ ರೈ ನಟಿಸುತ್ತಿದ್ದಾರೆ.

ರಚನಾಗೆ ಕನ್ನಡ ಚಿತ್ರರಂಗ ಹೊಸದು. ಇದಕ್ಕೂ ಮುನ್ನ ಅವರು ತುಳು ಚಿತ್ರವೊಂದರಲ್ಲಿ ನಟಿಸಿದ್ದರಂತೆ. ಈಗ ಮೊದಲ ಬಾರಿಗೆ ಕನ್ನಡ ಚಿತ್ರಕ್ಕಾಗಿ ಬಣ್ಣ ಹಚ್ಚುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಹೆಚ್ಚೇನೂ ಗುಟ್ಟು ಬಿಟ್ಟುಕೊಡದ ರಚನಾ, ಇದೊಂದು ಬಬ್ಲಿ ಪಾತ್ರ ಎಂದಷ್ಟೇ ಹೇಳುತ್ತಾರೆ. ಮಾಡಲಿಂಗ್, ನೃತ್ಯ ಮತ್ತು ಬ್ಯಾಡ್ಮಿಂಟನ್​ನಲ್ಲೂ ಹೆಸರು ಮಾಡಿರುವ ರಚನಾ, ‘ಓ ಮೈ ಡಾಗ್’ ಎಂಬ ಪುಸ್ತಕವನ್ನೂ ಬರೆದಿದ್ದಾರಂತೆ.

‘ವಾಮನ’ ಚಿತ್ರವನ್ನು ಚೇತನ್ ಕುಮಾರ್ ಎನ್ನುವವರು ನಿರ್ವಿುಸುತ್ತಿದ್ದು, ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸಂಭಾಷಣೆಕಾರರಾಗಿ ಗುರುತಿಸಿಕೊಂಡಿರುವ ಶಂಕರ್ ರಾಮನ್, ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net