'ಯಾಹೂ'ನಲ್ಲಿ ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಪುನೀತ್ ಪಡೆದ ಸ್ಥಾನವಿದು...​ ​

puneeth rajkumar (2)
Published on

ಮುಂಬೈ: ಯಾಹೂ ಕಂಪನಿಯು 2021ನೇ ಸಾಲಿನ ವಾರ್ಷಿಕ ಚಿತ್ರಣವನ್ನು ಗುರುವಾರ ತೆರೆದಿಟ್ಟಿದೆ. ಇದು ಸರ್ಚ್​ ಇಂಜಿನ್​ ಆಗಿದ್ದು, ಬಳಕೆದಾರರ ದೈನಂದಿನ ಹುಡುಕಾಟದ ಅಭ್ಯಾಸಗಳ ಆಧಾರದ ಮೇಲೆ ವರ್ಷದ ಪ್ರಮುಖ ವ್ಯಕ್ತಿಗಳು, ಸುದ್ದಿ ತಯಾರಕರು ಮತ್ತು ಘಟನೆಗಳ ಸಂಗ್ರಹ ಮಾಡಿ, ವರ್ಷಾಂತ್ಯದಲ್ಲಿ ಅದನ್ನು ಬಹಿರಂಗಪಡಿಸುತ್ತದೆ.

ಯಾಹೂವಿನಲ್ಲಿ ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಪುರುಷ ಸೆಲೆಬ್ರಿಟಿಗಳಲ್ಲಿ ಇತ್ತೀಚೆಗಷ್ಟೇ ಹೃದಯಾಘಾತದಿಂದ ಮೃತಪಟ್ಟ ಬಾಲಿವುಡ್​ ನಟ ಸಿದ್ಧಾರ್ಥ್​ ಶುಕ್ಲಾ ಮೊದಲ ಸ್ಥಾನದಲ್ಲಿದ್ದಾರೆ. ಸಿದ್ಧಾರ್ಥ್​ ರೀತಿಯೇ ಹೃದಯಾಘಾತದಿಂದ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ ಸ್ಯಾಂಡಲ್​ವುಡ್​ ರಾಜಕುಮಾರ ಪುನೀತ್​ ರಾಜ್​ಕುಮಾರ್​ 4ನೇ ಸ್ಥಾನದಲ್ಲಿದ್ದಾರೆ. ಅವರ ನಿಧನದ ನಂತರ ಸಾಕಷ್ಟು ಮಂದಿ ಜಾಲತಾಣ ಮೂಲಕ ನೆಚ್ಚಿನ ನಟನಿಗೆ ಕಂಬನಿ ಮಿಡಿದರು. ನಟ ಸಲ್ಮಾನ್​ ಖಾನ್​ ಮತ್ತು ಅಲ್ಲು ಅರ್ಜುನ್​ ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇತ್ತಿಚೆಗಷ್ಟೇ ನಿಧನರಾದ ಬಾಲಿವುಡ್​ ಸಿನಿ ದಿಗ್ಗಜ ದಿಲೀಪ್​ ಕುಮಾರ್​ 5ನೇ ಸ್ಥಾನದಲ್ಲಿದ್ದಾರೆ.

ಈ ವರ್ಷ ಹೆಚ್ಚು ಹುಡುಕಲ್ಪಟ್ಟ ಮಹಿಳಾ ಸೆಲೆಬ್ರಿಟಿಗಳಲ್ಲಿ ಕರೀನಾ ಕಪೂರ್​ ಮೊದಲ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಕರ್ತಿನಾ ಕೈಫ್​, ಪ್ರಿಯಾಂಕಾ ಚೋಪ್ರಾ (3), ಆಲಿಯಾ ಭಟ್​ (4) ಮತ್ತು ದೀಪಿಕಾ ಪಡುಕೋಣೆ (5) ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೇ ಡಿವೋರ್ಸ್​ನಿಂದ ಹೆಚ್ಚು ಸದ್ದು ಮಾಡಿದ ನಟಿ ಸಮಂತಾ ಅವರು 10ನೇ ಸ್ಥಾನ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net