ಟೈಪ್​ರೈಟರ್ ಮೇಲೆ ಕಥೆ ಬರೆದ ಆಕಾಂಕ್ಷಾ

Akaknsha
Published on

ಬೆಂಗಳೂರು: ಆರ್ ಎಕ್ಸ್ ಸೂರಿ ಚಿತ್ರದ ನಾಯಕಿ ಆಕಾಂಕ್ಷಾ ಕಥೆಯೊಂದನ್ನು ಬರೆದಿದ್ದು, ಅದು ಈಗ ಸಿನಿಮಾವಾಗುತ್ತಿದೆ. ಇದಕ್ಕೆ ‘ಟೈಪ್​ರೈಟರ್’ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ‘ಕರ್ವ’, ‘ಬಕಾಸುರ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ನವನೀತ್ ಬಂಡವಾಳ ಹೂಡುತ್ತಿದ್ದಾರೆ.

‘ಆಕಾಂಕ್ಷಾ ಬಂದು ನನಗೆ ಒನ್​ಲೈನ್ ಹೇಳಿದಾಗ, ಬಹಳ ಥ್ರಿಲ್ ಆದರೆ. ಕರ್ವ ನಂತರ ನನಗೆ ತುಂಬಾ ಇಷ್ಟವಾದ ಕಥೆ ಇದು. ಹಾಗಾಗಿ ನಾನು ಮತ್ತು ನನ್ನ ಚಿತ್ರಗಳ ಸಿನಿಮಾಟೋಗ್ರಫರ್ ಮೋಹನ್ ಇಬ್ಬರೂ ಸೇರಿ ಈ ಚಿತ್ರಕ್ಕೆ ಹಣ ಹಾಕುತ್ತಿದ್ದೇವೆ. ಆಕಾಂಕ್ಷಾ ಅವರದ್ದು ಒನ್​ಲೈನ್ ಅಷ್ಟೇ ಅದಕ್ಕೆ ಚಿತ್ರಕಥೆಯನ್ನು ನಾನು ಬರೆದಿದ್ದೇನೆ. ನನ್ನ ಎರಡು ಚಿತ್ರಗಳಿಗೆ ಸಹಾಕನಾಗಿ ಕೆಲಸ ಮಾಡಿದ್ದ ಹೇಮಂತ್ ಮೊದಲ ಬಾರಿಗೆ ಇದನ್ನು ನಿರ್ದೇಶನ ಮಾಡುತ್ತಿದ್ದಾರೆ.’ಎನ್ನುತ್ತಾರೆ ನಿರ್ದೇಶಕ ನವನೀತ್.

‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಮಹಿಳಾ ಪ್ರಧಾನ ಚಿತ್ರ. ಸದ್ಯಕ್ಕೆ ನಾಯಕನ ಆಯ್ಕೆ ಇನ್ನೂ ಆಗಿಲ್ಲ. ಆಕಾಂಕ್ಷ ಅವರೇ ನಾಯಕಿಯಾಗಿ ನಟಿಸಿಲಿದ್ದಾರೆ. ಅವರನ್ನು ಬಿಟ್ಟರೆ ಚಿತ್ರದಲ್ಲಿ ಬಹುಭಾಷ ಪೋಷಕ ನಟಿ ಊರ್ವಶಿ, ರವಿಶಂಕರ್ , ವಿಜಯ್ ಚೆಂಡೂರು, ಶಂಕರ್ ಅಶ್ವತ್ಥ್ ನಟಿಸುತ್ತಿದ್ದಾರೆ. ಆಂಟಿಕ್ ಟೈಪ್​ರೈಟರ್ ಮೇಲೆ ಈ ಚಿತ್ರದ ಕಥೇ ಸಾಗುತ್ತದೆ.ಕರ್ವ ಚಿತ್ರಕ್ಕೆ ಕೆಲಸ ಮಾಡಿದ್ದ ಎಲ್ಲ ತಂತ್ರಜ್ಞರು ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ’ಎಂದು ಮಾಹಿತಿ ನೀಡುತ್ತಾರೆ ನವನೀತ್. ಮಾರ್ಚ್ 16ರಿಂದ ಚಿತ್ರೀಕರಣ ಆರಂಭಿಸಲಿದ್ದು, ಅಷ್ಟರೊಳಗೆ ನಾಯಕ ಯಾರು ಎಂಬುದನ್ನು ಚಿತ್ರತಂಡವೇ ಅನೌನ್ಸ್ ಮಾಡಲಿದೆಯಂತೆ.

ಕಥೆ ಇಷ್ಟವಾಗಿ, ಕಷ್ಟವಾದರೂ ಸರಿ ಇದನ್ನು ನಾವೇ ನಿರ್ಮಾಣ ಮಾಡಬೇಕು ಎಂದು ತೀರ್ವನಿಸಿ ಮೋನಾಟಾಕೀಸ್ ಬ್ಯಾನರ್​ನ್ನು ಆರಂಭಿಸಿದ್ದೇವೆ. ಈ ಸಿನಿಮಾವನ್ನು ಜನ ಇಷ್ಟ ಪಡುತ್ತಾರೆ ಎಂಬ ನಂಬಿಕೆ ಇದೆ. | ನವನೀತ್ ನಿರ್ದೇಶಕ ಕಮ್ ನಿರ್ಮಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net