ವಿಜಯ್​ ದೇವರಕೊಂಡ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ ನಟಿ ಅನನ್ಯಾ: ಟಾಲಿವುಡ್​ನಲ್ಲಿ ಇದೇ ಹಾಟ್​ ಟಾಪಿಕ್​

Ananya
Published on

ಹೈದರಾಬಾದ್​: ಟಾಲಿವುಡ್​ ಸೂಪರ್​ಸ್ಟಾರ್​ ವಿಜಯ್​ ದೇವರಕೊಂಡ ಮತ್ತು ಬಾಲಿವುಡ್​ ಬ್ಯೂಟಿ ಅನನ್ಯಾ ಪಾಂಡೆ ಪ್ಯಾನ್​ ಇಂಡಿಯಾ "ಲೈಗರ್​" ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಶೂಟಿಂಗ್​ ಕಂಪ್ಲೀಟ್​ ಮಾಡಿದ್ದು, ಬಿಡುಗಡೆಗೆ ತಯಾರಿ ನಡೆಸುತ್ತಿದೆ.

ಇತ್ತೀಚೆಗೆ ವಿಜಯ್​ ಮತ್ತು ಅನನ್ಯಾ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅನನ್ಯಾ, ವಿಜಯ್​ ಬಗ್ಗೆ ಅಚ್ಚರಿಯೆ ಕಾಮೆಂಟ್​ ಮಾಡಿದ್ದಾರೆ. ವಿಜಯ್​ ಓರ್ವ ಅತ್ಯುತ್ತಮ ಸಹನಟ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅನನ್ಯಾ, ಸಿನಿಮಾದಲ್ಲಿ ಕಾಣುವುದಕ್ಕಿಂತ ಸಿನಿಮಾದಿಂದಾಚೆಗೆ ವಿಜಯ್​ ತುಂಬಾ ವಿಭಿನ್ನ ವ್ಯಕ್ತಿ.

ಒಮ್ಮೊಮ್ಮೆ ವಿಜಯ್​ನನ್ನು ಕಂಡರೆ ಆಶ್ಚರ್ಯವಾಗುತ್ತದೆ. ಸಿನಿಮಾಗಳಲ್ಲಿ ಅವರ ಎಲ್ಲಾ ಪಾತ್ರಗಳು ಧೈರ್ಯಶಾಲಿಗಳು. ಆದರೆ, ಹೊರಗಡೆ ವಿಜಯ್​ ಓರ್ವ ಅಂಜುಬುರುಕ. ಹೆದರಿಕೊಳ್ಳುವುದು ಜಾಸ್ತಿ. ಆದರೆ, ವಿಜಯ್ ಅವರು ಉತ್ತಮ ಸಹನಟ ಮತ್ತು ತನ್ನ ಜತೆ ಇರುವವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಾರೆ ಎಂದು ಹೇಳಿದರು.

ಇದೀಗ ವಿಜಯ್​ ಕುರಿತು ಅನನ್ಯಾ ಹೇಳಿರುವ ಮಾತು ಹಾಟ್​ ಟಾಪಿಕ್​ ಆಗಿದೆ. ಅಂದಹಾಗೆ ಲೈಗರ್​ ಸಿನಿಮಾವನ್ನು ಪುರಿ ಜಗನ್ನಾಥ್​ ಅವರು ನಿರ್ದೇಶನ ಮಾಡಿದ್ದು, ಧರ್ಮ ಪ್ರೊಡಕ್ಷನ್​ ನಿರ್ಮಾಣ ಮಾಡಿದೆ. ಆಗಸ್ಟ್​ 25ರಂದು ಚಿತ್ರ ಬಿಡುಗಡೆ ಮಾಡಲು ಸಿನಿಮಾ ತಂಡ ಎದುರ ನೋಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net