More

    ಬಿಜೆಪಿಗೆ ಮತ ಹಾಕದವರ ಮನೆಯನ್ನು ನೆಲಸಮ ಮಾಡುತ್ತೇವೆ ಎಂದ ಶಾಸಕನ ವಿರುದ್ಧ ದೂರು ದಾಖಲು

    ಹೈದರಾಬಾದ್​: ಇತ್ತೀಚೆಗೆ ಉತ್ತರ ಪ್ರದೇಶದ ಮತದಾರರಿಗೆ ಬೆದರಿಕೆ ಹಾಕಿದ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್​ ವಿರುದ್ಧ ಹೈದರಾಬಾದ್​ನ ಮಂಗಲಹತ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಭಾರತದ ಚುನಾವಣಾ ಆಯೋಗ ನೀಡಿದ ನಿರ್ದೇಶದನದಂತೆ ರಾಜಾ ಸಿಂಗ್​ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

    ಹೈದರಾಬಾದ್​ನ ಗೋಶಮಹಲ್​ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ರಾಜಾ ಸಿಂಗ್​ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವಿವಾದಾತ್ಮ ಹೇಳಿಕೆ ನೀಡಿದ್ದರು.

    ಮುಂದಿನ ಬಾರಿಯು ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಬಿಜೆಪಿಗೆ ಮತ ಹಾಕದವರ ಮನೆಗಳನ್ನು ಯೋಗಿ ನೇತೃತ್ವದ ಸರ್ಕಾರ ಜೆಸಿಬಿಯಿಂದ ನೆಲಸಮ ಮಾಡಲಿದೆ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

    ರಾಜಾ ಸಿಂಗ್​ ಹೇಳಿಕೆಯನ್ನು ಗಮನಿಸಿದ ಚುನಾವಣಾ ಆಯೋಗ ತಕ್ಷಣ ಶಾಸಕರಿಗೆ ನೋಟಿಸ್​ ನೀಡಿ, ಉತ್ತರ ನೀಡುವಂತೆ ಕೇಳಿತ್ತು. ಇದಾದ ಬೆನ್ನಲ್ಲೇ ಶನಿವಾರ ಪ್ರಕರಣ ದಾಖಲಿಸುವಂತೆ ಹೈದರಾಬಾದ್​ ಪೊಲೀಸರಿಗೆ ನಿರ್ದೇಶನ ನೀಡಿತು. ಅದರಂತೆಯೇ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ರಾಜಾ ಸಿಂಗ್​ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

    ಮನೆಗೆ ನುಗ್ಗಿದ ಚಿರತೆ ಮತ್ತು ಬಾಲಕಿ ಒಂದೇ ಕೋಣೆಯಲ್ಲಿ ಲಾಕ್​! ಮುಂದೇನಾಯ್ತು? ಇಲ್ಲಿದೆ ರೋಚಕ ಸ್ಟೋರಿ

    ಮಧ್ಯರಾತ್ರಿ ಟ್ರಕ್​ ನಿಲ್ಲಿಸಿ ಕೆಳಗಿಳಿದ ಚಾಲಕ: ನಂತರ ನಡೆದ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆ

    ‘ನೀನು ಹೆಚ್ಚು ದಿನ ಬದುಕಲ್ಲ…’ ಹೈಕೋರ್ಟ್‌ ಆದೇಶ ಪಾಲಿಸಿ ಎಂದ ಪ್ರಾಂಶುಪಾಲರಿಗೆ ಜೀವ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts