ನನ್ನ ಜೀವನ ಲೈಂಗಿಕತೆ ಸುತ್ತ ಸುತ್ತುತ್ತಿಲ್ಲ! ಕರಣ್​ ಜೋಹರ್​ಗೆ ಟಾಂಗ್​ ಕೊಟ್ಟ ವಿವೇಕ್​ ಅಗ್ನಿಹೋತ್ರಿ

Vivek
Published on

ಮುಂಬೈ: ದಿ ಕಾಶ್ಮೀರ್​​ ಫೈಲ್ಸ್​ ಸಿನಿಮಾ ಮೂಲಕ ಬಾಲಿವುಡ್​ನಲ್ಲಿ ಸಂಚಲನ ಸೃಷ್ಟಿ ಮಾಡಿದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಸ್ಟಾರ್​ ನಿರ್ದೇಶಕ ಕರಣ್​ ಜೋಹರ್​ ನಡೆಸಿಕೊಡುವ ಕಾಫಿ ವಿತ್​ ಕರಣ್​ ಕಾರ್ಯಕ್ರಮದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಕಾರ್ಯಕ್ರಮವನ್ನು ಬುಲ್​ಶಿಟ್​ ಎಂದಿರುವ ವಿವೇಕ್​ ಅದೊಂದು ಕೃತಕ ಶೋ ಎಂದು ಜರಿದಿದ್ದಾರೆ.

ಒಮ್ಮೆಯು ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ ವಿವೇಕ್​, ನಾನೆಂದು ಆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಏಕೆಂದರೆ, ನನ್ನ ಜೀವನ ಕೇವಲ ಸೆಕ್ಸ್​ ಸುತ್ತ ಸುತ್ತುತ್ತಿಲ್ಲ. ಸೆಕ್ಸ್​ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ನಾನೀಗ ಜೀವಿತಾವಧಿಯ ಮಧ್ಯ ವಯಸ್ಸಿನಲ್ಲಿದ್ದೇನೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಸೆಕ್ಸ್​ ಎಂಬುದು ನನ್ನ ಜೀವನದ ಪ್ರಾಥಮಿಕ ಕಾಳಜಿಯಲ್ಲ ಎಂದಿದ್ದಾರೆ.

ಮುಂದುವರಿದು ಮಾತನಾಡಿರುವ ವಿವೇಕ್​, ನಾನು ತುಂಬಾ ಆಧ್ಯಾತ್ಮಿಕ. ನಾನು ಸೆಕ್ಸ್​ ಕೇಂದ್ರಿತ ವ್ಯಕ್ತಿಯಲ್ಲ. ಆದರೂ ನಾನದನ್ನು ನನ್ನ ಪತ್ನಿಯ ಜೊತೆ ಎಂಜಾಯ್​ ಮಾಡುತ್ತೇನೆ. ಆದರೆ, ನನ್ನ ಜೀವನ ಅದರ ಸುತ್ತಲೂ ಸುತ್ತುವುದಿಲ್ಲ ಎಂದು ಖಡಕ್​ ಆಗಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಕರಣ್​ ಜೋಹರ್​ ಅವರ ಕಾಫಿ ವಿತ್​ ಕರಣ್​ ಕಾರ್ಯಕ್ರಮ ಆಗಾಗ ಸೆಕ್ಸ್​ ಚಾಟ್​ಗಳಿಂದಲೇ ವಿವಾದಕ್ಕೆ ಗುರಿಯಾಗುತ್ತಿರುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net