ಬಾವ ರಾಜ್​ ಕುಂದ್ರಾ ಬಂಧನ: ಕುತೂಹಲ ಸೃಷ್ಟಿಸಿದ ನಟಿ ಶಮಿತಾ ಶೆಟ್ಟಿಯ ಇನ್​ಸ್ಟಾಗ್ರಾಂ ಪೋಸ್ಟ್​!

Shamitha Shetty
Published on

ಮುಂಬೈ: ಬಾಲಿವುಡ್​ ನಟಿ ಹಾಗೂ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಅವರು ಇತ್ತೀಚೆಗಷ್ಟೇ ಇನ್​ಸ್ಟಾಗ್ರಾಂನಲ್ಲಿ ಕಷ್ಟಗಳ ಮಧ್ಯೆ ಶಕ್ತಿ ಮತ್ತು ಪರಿಶ್ರಮ ವಿಷಯ ಕುರಿತು ದ್ವಂದ್ವಾರ್ಥದ ಟಿಪ್ಪಣಿಯೊಂದನ್ನು ಬರೆದುಕೊಂಡಿದ್ದಾರೆ. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಾವ ರಾಜ್​ ಕುಂದ್ರಾ ಜುಲೈ 20ರಂದು ಬಂಧನವಾಗಿದ್ದು, ಸದ್ಯ ಶಮಿತಾ ಕುಟುಂಬ ಕಾನೂನು ಹೋರಾಟ ಎದುರಿಸುತ್ತಿದೆ. ಅಲ್ಲದೆ, ಸಹೋದರಿ ಶಿಲ್ಪಾ ಶೆಟ್ಟಿ ಸಹ ಪೊಲೀಸ್​ ವಿಚಾರಣೆಯನ್ನು ಎದುರಿಸಿದ್ದಾರೆ.

ಶಮಿತಾ ಕಪ್ಪು ಬಣ್ಣದ ಟಾಪ್​ ಧರಿಸಿರುವ ಸೆಲ್ಫಿ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕೆಲವೊಮ್ಮೆ ನಿಮ್ಮೊಳಗಿನ ಶಕ್ತಿಯು ಎಲ್ಲರಿಗೂ ಕಾಣುವ ಉರಿಯುತ್ತಿರುವ ದೊಡ್ಡ ಜ್ವಾಲೆಯಾಗಿರುವುದಿಲ್ಲ... ನೀವು ಮುಂದುವರಿಯುತ್ತಿರಿ. ನಿಮ್ಮ ಶಕ್ತಿಯನ್ನು ಇತರರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲ. ನೀವು ಹೇಳುವ ಅಥವಾ ಮಾಡುವ ಯಾವುದಾದರೂ ಆ ಕ್ಷಣದಲ್ಲಿ ವೈಯಕ್ತಿಕ ವಿಚಾರಗಳೊಂದಿಗೆ ಲೆನ್ಸ್​ ಮೂಲಕ ಫಿಲ್ಟರ್​ ಆಗುತ್ತದೆ. ಇದು ನಿಮ್ಮ ಬಗ್ಗೆ ಅಲ್ಲ. ಏನೇ ಆಗಲಿ ನಿಮ್ಮ ಕೆಲಸವನ್ನು ಸಾಧ್ಯವಾದಷ್ಟು ಸಮಗ್ರತೆ ಮತ್ತು ಪ್ರೀತಿಯಿಂದ ಮಾಡುತ್ತಲೇ ಇರಿ ಎಂದು ಶಮಿತಾ ಶೆಟ್ಟಿ ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಗಂಡನ ಬಂಧನ ಬಳಿಕ ಇನ್​​ಸ್ಟಾಗ್ರಾಂ ಸ್ಟೋರಿ ಪೋಸ್ಟ್​ ಮಾಡಿದ್ದ ನಟಿ ಶಿಲ್ಪಾ ಶೆಟ್ಟಿ, ನಾವು ಇರಬೇಕಾದ ಸ್ಥಳವು ಇದೀಗ ಇಲ್ಲಿಯೇ ಇದೆ. ಏನಾಗಿದೆ ಅಥವಾ ಏನಾಗಿರಬಹುದು ಎಂದು ಆತಂಕದಿಂದ ನೋಡುತ್ತಿಲ್ಲ ಆದರೆ, ಯಾವುದು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ. ನಾನು ಜೀವಂತವಾಗಿರುವುದು ಅದೃಷ್ಟ ಎಂದು ತಿಳಿದಾಗ ನಾನು ದೀರ್ಘ ಉಸಿರನ್ನು ತೆಗೆದುಕೊಂಡೆ. ಹಿಂದೆಯು ಸವಾಲುಗಳಿಂದಲೇ ಉಳಿದಿದ್ದೇನೆ ಮತ್ತು ಭವಿಷ್ಯದಲ್ಲೂ ಸವಾಲುಗಳಿಂದಲೇ ಉಳಿದುಕೊಳ್ಳುತ್ತೇವೆ. ಇಂದಿನ ನನ್ನ ಜೀವನವನ್ನು ತಡೆಯುವ ಯಾವುದರ ಬಗ್ಗೆಯೂ ನಾನು ಗಮನವಹಿಸುವುದಿಲ್ಲ ಎಂದಿದ್ದರು.

ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ ಶಮಿತಾ, ಜೀ5 ನಿರ್ಮಾಣದ ವೆಬ್​ ಸರಣಿ ಬ್ಲ್ಯಾಕ್​ ವಿಡೋದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಸಹೋದರಿ ಶಿಲ್ಪಾ ಶೆಟ್ಟಿ ಇತ್ತೀಚೆಗಷ್ಟೇ ಬಿಡುಗಡೆಯಾದ ಹಂಗಾಮ-2 ಚಿತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net