ಬ್ಲೂ ಫಿಲ್ಮ್​ ದಂಧೆಯಲ್ಲಿ ಪತಿ ರಾಜ್​ ಕುಂದ್ರಾ ಬಂಧನ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ

Rajkundra
Published on

ನವದೆಹಲಿ: ಬ್ಲೂಫಿಲ್ಮ್​ ದಂಧೆಯಲ್ಲಿ ಬಂಧನವಾಗಿರುವ ಉದ್ಯಮಿ ರಾಜ್​ ಕುಂದ್ರಾ ಕುರಿತು ಪತ್ನಿ ಶಿಲ್ಪಾ ಶೆಟ್ಟಿ ಕೊನೆಗೂ ಮೌನ ಮುರಿದಿದ್ದಾರೆ. ಗುರುವಾರ ರಾತ್ರಿ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಲೇಖಕ ಜೇಮ್ಸ್​ ಥರ್ಬರ್​ ಪುಸ್ತಕದ ಪೇಜ್​ ಒಂದನ್ನು ಶಿಲ್ಪಾ ಶೆಟ್ಟಿ ಶೇರ್​ ಮಾಡಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪೇಜ್​ನ ಒಂದು ಭಾಗವನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ "ನಾವು ಇರಬೇಕಾದ ಸ್ಥಳವು ಇದೀಗ ಇಲ್ಲಿಯೇ ಇದೆ. ಏನಾಗಿದೆ ಅಥವಾ ಏನಾಗಿರಬಹುದು ಎಂದು ಆತಂಕದಿಂದ ನೋಡುತ್ತಿಲ್ಲ ಆದರೆ, ಯಾವುದು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ." ಎಂದು ಬರೆಯಲಾಗಿದ್ದು, ಸವಾಲುಗಳನ್ನು ಎದುರಿಸುವ ಬಗ್ಗೆ ಮಾತನಾಡಿದ್ದಾರೆ.

ನಾನು ಜೀವಂತವಾಗಿರುವುದು ಅದೃಷ್ಟ ಎಂದು ತಿಳಿದಾಗ ನಾನು ದೀರ್ಘ ಉಸಿರನ್ನು ತೆಗೆದುಕೊಂಡೆ. ಹಿಂದೆಯು ಸವಾಲುಗಳಿಂದಲೇ ಉಳಿದಿದ್ದೇನೆ ಮತ್ತು ಭವಿಷ್ಯದಲ್ಲೂ ಸವಾಲುಗಳಿಂದಲೇ ಉಳಿದುಕೊಳ್ಳುತ್ತೇವೆ. ಇಂದಿನ ನನ್ನ ಜೀವನವನ್ನು ತಡೆಯುವ ಯಾವುದರ ಬಗ್ಗೆಯೂ ನಾನು ಗಮನವಹಿಸುವುದಿಲ್ಲ ಎಂದಿದ್ದಾರೆ.

ಮುಂಬೈ ಪೊಲೀಸರ ಪ್ರಕಾರ ಬ್ಲೂ ಫಿಲ್ಮ್​ ದಂದೆಯಲ್ಲಿ ಪ್ರಮುಖ ಸಂಚುಗಾರ ರಾಜ್​ ಕುಂದ್ರಾ. ಪೋರ್ನ್​ ವಿಡಿಯೋಗಳನ್ನು ತಯಾರಿಸಿ ಅದನ್ನು ಬೇರೆ ದೇಶದ ವಿವಿಧ ಆ್ಯಪ್​ಗಳಲ್ಲಿ ಅಪ್​ಲೋಡ್​ ಮಾಡಿರುವ ಗಂಭೀರ ಆರೋಪದ ಮೇಲೆ ರಾಜ್​ ಕುಂದ್ರಾರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅವರು ಯಾವುದೇ ಸಕ್ರಿಯ ಪಾತ್ರವಿಲ್ಲ ಎಂಬುದನ್ನು ತನಿಖೆಯಲ್ಲಿ ಬಹಿರಂಗವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net