ರವೀಂದರ್​ ಮಾಡಿದ್ದ ಮೆಸೇಜ್​ ನೋಡಿ, ಸ್ವಲ್ಪ ಸಮಯ ಯೋಚಿಸಿ ಮದ್ವೆಗೆ ಒಪ್ಪಿದೆ! ಆಸಕ್ತಿಕರ ಸಂಗತಿ ಬಿಚ್ಚಿಟ್ಟ ನಟಿ ಮಹಾಲಕ್ಷ್ಮೀ

VJ Mahalakshmi
Published on

ಚೆನ್ನೈ: ಧಾರಾವಾಹಿ ನಟಿ ವಿ.ಜೆ. ಮಹಾಲಕ್ಷ್ಮೀ ಮತ್ತು ತಮಿಳು ನಿರ್ಮಾಪಕ ರವೀಂದರ್​ ತಮ್ಮ ಪ್ರೇಮ ವಿವಾಹದಿಂದಲೇ ಇತ್ತೀಚೆಗೆ ಭಾರಿ ಸುದ್ದಿಯಾದರು. ಕಳೆದ ಮೂರು ದಿನಗಳಿಂದ ಈ ಜೋಡಿ ಟ್ರೆಂಡಿಂಗ್​ನಲ್ಲಿದೆ. ಅದಕ್ಕೆ ಕಾರಣ ನಟಿ ಮತ್ತು ನಿರ್ಮಾಪಕ ನಡುವಿನ ವ್ಯತ್ಯಾಸ. ಅದೇನೆಂದರೆ, ಮಹಾಲಕ್ಷ್ಮೀ ಸೌಂದರ್ಯವತಿಯಾಗಿದ್ದು, ಆಕೆ ಮದುವೆ ಆಗಿರುವ ರವೀಂದರ್​ ದಡೂತಿ ಮನುಷ್ಯ. ಹೀಗಾಗಿ ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಿಕ್ಕಾಪಟ್ಟೆ ಟ್ರೋಲ್​ ಸಹ ಆಯಿತು.

ಮಹಾಲಕ್ಷ್ಮೀ ಮತ್ತು ರವೀಂದರ್​ ಇಬ್ಬರಿಗೂ ಇದು ಎರಡನೇ ಮದುವೆ. ಟ್ರೋಲ್​ ಹೊರತಾಗಿಯೂ ಅನೇಕ ಮಂದಿ ನವಜೋಡಿ ಶುಭ ಹಾರೈಸಿದ್ದಾರೆ. ಮದುವೆ ಬಳಿಕ ಇದೀಗ ರವೀಂದರ್​ ಮತ್ತು ಮಹಾಲಕ್ಷ್ಮೀ ತಮ್ಮ ಪ್ರೇಮ ವಿವಾಹದ ಕುರಿತು ಕೆಲವು ಆಸಕ್ತಿಕರ ಸಂಗತಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.

ನಮ್ಮಿಬ್ಬರ ಮದುವೆ ತಮಿಳುನಾಡು ಮಾತ್ರವಲ್ಲದೆ, ಬೇರೆ ರಾಜ್ಯಗಳಲ್ಲೂ ಬಹಳ ಸದ್ದು ಮಾಡಿದೆ ಮತ್ತು ಅಚ್ಚರಿಯನ್ನು ಉಂಟು ಮಾಡಿದೆ ಎಂದರು. ತಮ್ಮ ಲವ್​ ಸ್ಟೋರಿ ಬಗ್ಗೆ ಮಾತನಾಡಿದ ಮಹಾಲಕ್ಷ್ಮೀ, ರವೀಂದರ್​ ಅವರೇ ನನಗೆ ಮೊದಲು ಪ್ರೇಮ ನಿವೇದನೆ ಮಾಡಿದರು. ನೀವು ನನ್ನ ಪತ್ನಿಯಾಗುವಿರಾ? ಎಂದು ಮಸೇಜ್​ ಮಾಡಿದರು. ಮಸೇಜ್​ ನೋಡಿದ ಬಳಿಕ ತುಂಬಾ ಸಮಯ ತೆಗೆದುಕೊಂಡು, ಯೋಚಿಸಿ, ಒಪ್ಪಿಗೆ ಸೂಚಿಸಿದೆ ಎಂದು ಹೇಳಿದರು.

ನಮ್ಮಿಬ್ಬರ ಮದುವೆ ಈ ಮಟ್ಟದಲ್ಲಿ ವೈರಲ್​ ಆಗುತ್ತದೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಅನೇಕ ಮಂದಿ ನಮಗೆ ಕರೆ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಕೆಲವರು ಟ್ರೋಲ್​ ಸಹ ಮಾಡುತ್ತಿದ್ದಾರೆ ಎಂದು ನವದಂಪತಿ ತಿಳಿಸಿದರು.

ನಮ್ಮ ಮದುವೆ ಬಗ್ಗೆ ಮನೆಯವರಿಗೆ ಹೇಳಿದಾಗ, ಎರಡೂ ಮನೆಯವರು ಗ್ರೀನ್​ ಸಿಗ್ನಲ್​ ನೀಡಿದರು. ನನ್ನ ತಂದೆ ದೊಡ್ಡ ಕೊರಿಯೋಗ್ರಾಫರ್​. ಬಾಹುಬಲಿ ಮತ್ತು ಆರ್​ಆರ್​ಆರ್​ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ನಾವಿಬ್ಬರು ಮದುವೆ ಆಗಿರುವುದರಿಂದ ಎರಡು ಕುಟುಂಬಗಳು ತುಂಬಾ ಸಂತೋಷವಾಗಿವೆ.

ನಾವು ಹನಿಮೂನ್​ಗೆ ಪ್ಲ್ಯಾನ್​ ಮಾಡಿದ್ದೇವೆ. ಆದರೆ, ಶೂಟಿಂಗ್​ ಇರುವ ಕಾರಣ, ಒಂದು ತಿಂಗಳ ಬಳಿಕ ಹನಿಮೂನ್​ಗೆ ಹೋಗಲು ನಿರ್ಧಾರ ಮಾಡಿದ್ದೇವೆ. ನನಗೆ ಸ್ವಿಡ್ಜರ್​ಲೆಂಡ್​ ಅಂದರೆ ತುಂಬಾ ಇಷ್ಟ. ಹೀಗಾಗಿ ಅಲ್ಲಿಗೆ ಹೋಗಲು ಪ್ಲ್ಯಾನ್​ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ರವೀಂದರ್​ ಮಾತನಾಡಿ, ನಮ್ಮಿಬ್ಬರ ಮದುವೆ ಬಳಿಕ ಬಾಡಿ ಶೇಮಿಂಗ್​ ಬಗ್ಗೆ ಪಾಸಿಟಿವ್​ ಮತ್ತು ನೆಗಿಟಿವ್​ ಕಾಮೆಂಟ್​ಗಳ ಬರುತ್ತಿವೆ. ಬೇರೆಯವರ ಜೀವನ ಅಂತಾ ಬಂದಾಗ ಅದರ ಬಗ್ಗೆ ಮಾತನಾಡುವುದು ಸುಲಭ ಎಂದು ಬೇಸರ ಹೊರಹಾಕಿದರು. ಇದೇ ವಿಚಾರದ ಬಗ್ಗೆ ಮಹಾಲಕ್ಷ್ಮೀ ಮಾತನಾಡಿ, ನಾನು ನನ್ನ ಗಂಡನ ಬಗ್ಗೆ ಖುಷಿಯಾಗಿದ್ದೇನೆ. ಬಾಡಿ ಶೇಮಿಂಗ್​ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಮನಸ್ಸು ನನಗೆ ತುಂಬಾ ಮುಖ್ಯ. ನಾನು ಯಾವುದೇ ಕಾಮೆಂಟ್​ ಬಗ್ಗೆ ಯೋಚಿಸುವುದಿಲ್ಲ. ಎಂದು ಹೇಳಿದರು.

ಅಂದಹಾಗೆ ಮಹಾಲಕ್ಷ್ಮೀ ಅವರು ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್‌, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ರವೀಂದರ್‌ ಚಂದ್ರಶೇಖರನ್‌ ಅವರು ‘ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್‌ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ರವೀಂದರ್ ನಿರ್ಮಾಣದ ‘ವಿಡಿಯುಮ್‌ ವಾರೈ ಕಾಥಿರು’ ಸಿನಿಮಾದಲ್ಲೂ ಮಹಾಲಕ್ಷ್ಮೀ ಅಭಿನಯಿಸಿದ್ದರು. ಆ ಚಿತ್ರದಲ್ಲಿ ವಿದಾರ್ಥ್‌ ಮತ್ತು ವಿಕ್ರಾಂತ್ ಪ್ರಮುಖ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಮದುವೆಗೆ ಚಿತ್ರರಂಗದವರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net