ನಟ ನೀನಾಸಂ ಸತೀಶ್​ ಅವರಿಗೆ ಮಾತೃ ವಿಯೋಗ: ಮದ್ದೂರಿನ ಯಲದಳ್ಳಿಯಲ್ಲಿ ಅಂತ್ಯಕ್ರಿಯೆ

SathiSh Ninasam
Published on

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ನೀನಾಸಂ ಸತೀಶ್​ ಅವರ ತಾಯಿ ಚಿಕ್ಕತಾಯಮ್ಮ ಇಂದು (ಅ.1) ಕೊನೆಯುಸಿರೆಳೆದಿದ್ದಾರೆ.

ಆರ್​ಆರ್ ನಗರದಲ್ಲಿರುವ ಸತೀಶ್​ ಅವರ ನಿವಾಸದಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಚಿಕ್ಕತಾಯಮ್ಮ ಅವರಿಗೆ 80ವರ್ಷ ವಯಸ್ಸಾಗಿತ್ತು. ಚಿಕ್ಕತಾಯಮ್ಮ ಅವರು ಮಗ ಸತೀಶ್​ ಅವರ ಜೊತೆಯಲ್ಲಿ ಬೆಂಗಳೂರಿನಲ್ಲೇ ಇದ್ದರು. ಅವರ ಅಂತ್ಯಕ್ರಿಯೆ ಮದ್ದೂರಿನ ಯಲದಳ್ಳಿಯಲ್ಲಿ ನಡೆಯಲಿದೆ. ಇಂದೇ ಪಾರ್ಥೀವ ಶರೀರವನ್ನು ಯಲದಳ್ಳಿಗೆ ತೆಗೆದುಕೊಂಡು ಹೋಗಲಿದ್ದಾರೆಂದು ತಿಳಿದುಬಂದಿದೆ.

ಸುಮಾರು ಒಂದು ವರ್ಷದಿಂದ ಚಿಕ್ಕತಾಯಮ್ಮ ಅವರಿಗೆ ಆರೋಗ್ಯ ಸಮಸ್ಯೆಯಿತ್ತು. ಸತೀಶ್ ಮತ್ತು ಅವರ ಹೆಂಡತಿ ಇಬ್ಬರು ಚಿಕ್ಕತಾಯಮ್ಮ ಅವರ ಆರೈಕೆ ಮಾಡುತ್ತಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಸತೀಶ್​ ಬಿಜಿಯಾಗಿರುತ್ತಿದ್ದರೂ ಸಮಯ ಸಿಕ್ಕಾಗಲೆಲ್ಲ ಮನೆಯಲ್ಲೇ ಹೆಚ್ಚ ಸಮಯ ಕಳೆಯುತ್ತಾ ತಾಯಿಯನ್ನು ನೋಡಿಕೊಳ್ಳುತ್ತಿದ್ದರು.

ಅನೇಕ ಸಂದರ್ಶನಗಳಲ್ಲಿ ಸತೀಶ್​ ತಮ್ಮ ತಾಯಿಯ ಬಗ್ಗೆ ಮಾತನಾಡಿದ್ದಾರೆ. ಇಂದು ನಾನು ಏನಾಗಿದೆನೋ ಅದಕ್ಕೆ ಕಾರಣ ನನ್ನ ತಾಯಿ ಎಂದು ಸತೀಶ್​ ಹೇಳಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net